ಚನ್ನಮ್ಮಾಜಿ ಐಕ್ಯ ಸ್ಥಳ ರಾಷ್ಟ್ರೀಯ ಸ್ಮಾರಕವಾಗಲಿ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಫೆ3 : ‘ವೀರರಾಣಿ ಕಿತ್ತೂರು ಚನ್ನಮ್ಮನ ಐಕ್ಯಸ್ಥಳ, ಜನ್ಮಸ್ಥಳ, ಸಂಸ್ಥಾನವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ 195 ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಕಿತ್ತೂರು ಚನ್ನಮ್ಮನ ಜನ್ಮಸ್ಥಳ ಕಾಕತಿಯಿಂದ ಚನ್ನಮ್ಮನ ಐಕ್ಯ ಸ್ಥಳದವರೆಗೆ ನಡೆದ ಜ್ಯೋತಿ ಯಾತ್ರೆಯ ನೇತೃತ್ವವಹಿಸಿ ಅವರು ಮಾತನಾಡಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೆ ಬಲಿದಾನಗೈದ ವೀರರ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಇದರಿಂದ ಯುವ ಜನಾಂಗಕ್ಕೆ ರಾಷ್ರ್ಟೀಯತೆ ಮತ್ತು ದೇಶಾಭಿಮಾನ ಮೈಗೂಡಿಸಲು ಪ್ರೇರಣೆ ಸಿಗಲಿದೆ. ಸರ್ಕಾರ ಚನ್ನಮ್ಮನ ಸ್ಮರಣೋತ್ಸವನ್ನು ಪ್ರತಿ ವರ್ಷ ದೇಶಾದ್ಯಂತ ಹಬ್ಬದಂತೆ ಆಚರಣೆ ಮಾಡುವ ಮೂಲಕ ಚನ್ನಮ್ಮನಿಗೆ ಗೌರವ ಸಮರ್ಪಿಸಬೇಕು’ ಎಂದರು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ‘ಸರ್ಕಾರ ಇಚ್ಚಾ ಶಕ್ತಿ ತೋರಿಸಿ ಚನ್ನಮ್ಮನ ಜನ್ಮ ಭೂಮಿ, ಐಕ್ಯ ಸ್ಥಳದಲ್ಲಿ ಕುರುಹು ಪತ್ತೆ ಮಾಡಲು ಒಂದು ಸಂಶೋಧನಾ ಸಮಿತಿ ರಚಿಸಬೇಕು. ಚನ್ನಮ್ಮನ ಜನ್ಮಸ್ಥಳ, ಐಕ್ಯಸ್ಥಳ, ಆಯಾ ಕ್ಷೇತ್ರಕ್ಕೆ ಸೀಮಿತವಾಗಿರುವದು ಕಳವಳಕಾಗಿ ಆಗಿದೆ. ಈ ಮೂರು ಕ್ಷೇತ್ರಗಳು ರಾಷ್ರ್ಟೀಯ ಸ್ಮಾರಕವಾಗಿಸಿ ಅಂತರಾಷ್ರ್ಟಿಯ ಮಟ್ಟದಲ್ಲಿ ಪರಿಚಯಿಸುವ ಕೆಲಸವಾಗಬೇಕು’ ಎಂದರು.

ಲಿಂಗಾಯತ ಪಂಚಮಸಾಲಿ ತಾಲ್ಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳನ್ನವರ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಶಿವಲೀಲ ಕುಲಕರ್ಣಿ, ಪುರಸಭೆ ಸದಸ್ಯ ರಾಜು ಜನ್ಮಟ್ಟಿ, ಮುರುಗೇಶ ಗುಂಡ್ಲೂರ, ಡಿ.ಬಿ.ಸಂಗನಗೌಡರ, ಎಫ್.ಎಸ್.ಸಿದ್ದನಗೌಡರ, ಮಹೇಶ ಹರಕುಣಿ, ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ, ನಿಂಗಪ್ಪ ಪಿರೋಜಿ, ಗೋಕಾಕದ ಡಾ.ಮಹಾಂತೇಶ ಕಡಾಡಿ, ಮಹಾಂತೇಶ ಪಾಟೀಲ, ಕಾರ್ತಿಕ ಪಾಟೀಲ ಇದ್ದರು.

ಜ್ಯೋತಿ ಯಾತ್ರೆಗೆ ಭವ್ಯ ಸ್ವಾಗತ; ಕಾಕತಿಯಿಂದ ಹಿರೇಬಾಗೇವಾಡಿ, ಕಿತ್ತೂರು, ಸಂಗೊಳ್ಳಿ, ಅಮಟೂರು ಮಾರ್ಗವಾಗಿ ಪಟ್ಟಣಕ್ಕೆ ಬಂದ ಚನ್ನಮ್ಮನ ಲಿಂಗೈಕ್ಯ ಜ್ಯೋತಿ ಯಾತ್ರೆಯನ್ನು ಶಾಸಕ ಮಹಾಂತೇಶ ಕೌಜಲಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಮುಖ್ಯಾಧಿಕಾರಿ ವೀರೇಶ ಹಸಬಿ ಸ್ವಾಗತಿಸಿದರು.

ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ಪುರಸಭೆ ಸದಸ್ಯರಾದ ಗುರು ಮೆಟಗುಡ್ಡ, ವಿಜಯ ಬೋಳನ್ನವರ, ಸಂಜೀವಗೌಡ ಸಂಗನಗೌಡರ, ಮೀನಾಕ್ಷಿ ಕುಡಸೋಮಣ್ಣವರ, ರಾಜು ನರಸನ್ನವರ, ಸುಭಾಸ ರುದ್ರಾಪೂರ, ಈರಣ್ಣಾ ಬೆಟಗೇರಿ, ಶಿವಾನಂದ ಬೆಳಗಾವಿ, ವೀರೇಶ ಹಲಕಿ, ಗಂಗಾಧರ ಹುಲಕುಂದ, ಆಶ್ವೀನ್ ಇಂಗಳಗಿ, ಮಾಜಿ ಸೈನಿಕರು, ಕ್ರೀಯಾಶೀಲ ಸ್ವಾಭಿಮಾನಿ ಗೆಳೆಯರ ಬಳಗ, ಅನೇಕರು ಇದ್ದರು.