ಚನ್ನಮ್ಮಾಜಿಯ ಭಾವಚಿತ್ರದ ಭವ್ಯ ಮೆರವಣಿಗೆ

ನರೇಗಲ್ಲ,ಟಿ.22:ನರೇಗಲ್ಲ ಪಟ್ಟಣದಲ್ಲಿ ಪಂಚಮಸಾಲಿ ಸಮಾಜ ಏರ್ಪಡಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಮತ್ತು ಜಯಂತ್ಯೋತ್ಸವದ ನಿಮಿತ್ಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಭವ್ಯ ಭಾವಚಿತ್ರದ ಮೆರವಣಿಗೆ ಅತ್ಯಂತ ವೈಭವ ಮತ್ತು ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಕೊಂತಿ ಮಲ್ಲಪ್ಪನ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯು ವೀರಭದ್ರೇಶ್ವರ ದೇವಸ್ಥಾನ, ಶ್ರೀ ಗಣೇಶ ದೇವಸ್ಥಾನ, ಶ್ರೀ ವೀರಭದ್ರೇಶ್ವರ ಪಾದಗಟ್ಟೆಯ ಮೂಲಕ ಹಳೆ ಬಸ್ ನಿಲ್ದಾಣ, ಮುಖ್ಯ ರಸ್ತೆ ಮೂಲಕ ಹಾದು ಸಮಾವೇಶದ ಸ್ಥಳಕ್ಕೆ ಬಂದು ತಲುಪಿತು.
ಮೆರವಣಿಗೆಯ ಸಮ್ಮುಖದಲ್ಲಿ ಅಡವಿ ಸೋಮಾಪುರದ ಸಿದ್ಧಲಿಂಗೇಶ್ವರ ಕಲಾ ತಂಡ, ಕೊಣ್ಣೂರಿನ ಚಕ್ರ ಮಹಿಳಾ ಡೊಳ್ಳು ಕುಣಿತ ಮತ್ತು ಹಿರೇಮ್ಯಾಗೇರಿಯ ಕರಿಸಿದ್ಧೇಶ್ವರ ಕರಡಿ ಮಜಲಿನ ತಂಡದವರು ಮೆರವಣಿಗೆಗೆ ಹೆಚ್ಚಿನ ಮೆರಗು ನೀಡಿದ್ದರು. ಮೆರವಣಿಗೆಯಲ್ಲಿ ನರೇಗಲ್ಲ ಪಟ್ಟಣದ ಪಂಚಮಸಾಲಿ ಸಮಾಜದ ಎಲ್ಲ ಮುಖಂಡರು. ಸುತ್ತಲಿನ ಮತ್ತು ತಾಲೂಕಿನ ಎಲ್ಲ ಗ್ರಾಮಗಳ ಸಮಾಜ ಮುಖಂಡರು ಪಾಲ್ಗೊಂಡು ಮೆರವಣಿಗೆಯ ಯಶಸ್ಸಿಗೆ ಸಹಕರಿಸಿದರು.