ಚನ್ನಮ್ಮನ ಕಿತ್ತೂರಲ್ಲಿ ಸ್ವಾತಂತ್ರ್ಯೋತ್ಸವ

ಚನ್ನಮ್ಮನ ಕಿತ್ತೂರ,ಆ16: ಸ್ವಾತಂತ್ರ್ಯಕ್ಕಾಗಿ ಹೋರಾಡದಿದ್ದರೆ ಇಂದು ಸ್ವಾತಂತ್ರ್ಯೋತ್ಸವದ ಹಬ್ಬವನ್ನಾಗಿ ಆಚರಿಸಲು ಸಾಧ್ಯವಾಗುತ್ತಿರಲಿಲ್ಲ. ಎಂದು ತಹಶೀಲ್ದಾರ ರವೀಂದ್ರ ಹಾದಿಮನಿ ಹೇಳಿದರು.
ಐತಿಹಾಸಿಕ ಗಡಾದಮರಡಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತ್ನಾಡಿದ ಅವರು, ಪ್ರಪ್ರಥಮವಾಗಿ ರಾಣಿ ಚನ್ನಮ್ಮಾಜೀ ಬ್ರಿಟಿಷರ ವಿರುದ್ದ ಹೋರಾಡಿದ ಮಹಿಳೆಯಾಗಿದ್ದಾಳೆ. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನಮ್ಮವರಿಂದ ಸೆರೆಯಾದರು ಛಲ ಬಿಡಲಿಲ್ಲ. ಒಬ್ಬ ಸಾಮಾನ್ಯ ವಾಲಿಕಾರನಾಗಿದ್ದ ಆತನ ತ್ಯಾಗ ಬಲಿದಾನ ಹೆಸರಾಗಿ ಉಳಿದಿದೆ. ಇದು ಇಂದಿನ ಯುವ ಪಿಳಿಗೆಗೆ ದಾರಿದೀಪವಾಗಬೇಕು. ಸೈನಿಕರು ಗಡಿಭಾಗದಲ್ಲಿ ಇದ್ದುಕೊಂಡು ದೇಶಕ್ಕಾಗಿ ತಮ್ಮ ಪ್ರಾಣ ಮುಡುಪಿಟ್ಟು ನಮ್ಮನ್ನು ಕಾಪಾಡುತ್ತಾರೆಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ದೇಶದ ಪ್ರತಿ ಮೂಲೆ-ಮೂಲೆಯಲ್ಲಿಯೂ 77ನೇ ಸ್ವಾತಂತ್ರ್ಯೋತ್ಸವದ ಹಬ್ಬದ ವಾತಾವರಣ ಮನೆ ಮಾಡಿದೆ. ಇಂದು ಎಷ್ಟೋ ಮಹನೀಯರು ತಮ್ಮ ಪ್ರಾಣ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಇದು ಭಾಷಣದಲ್ಲಿ ಹೇಳಿದರಷ್ಟೇ ಸಾಲದು ಇಂದಿನ ಯುವಪಿಳಿಗೆಗೆ ಇದರ ಅರಿವು ಮೂಡಿಸುವುದು ನಮ್ಮ-ನಿಮ್ಮಲ್ಲರ ಜವಾಬ್ದಾರಿಯಾಗಿದೆ ಎಂದರು.
ನಂತರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಚನ್ನಮ್ಮಾಜೀ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಧ್ವಜ ಹಾರಿಸಲಾಯಿತು. ಶಾಲಾ ಮಕ್ಕಳಿಂದ ರಾಷ್ಟ್ರಗೀತೆ ಏರ್ಪಟ್ಟಿತ್ತು. ವಿವಿಧ ಶಾಲೆಗಳಿಂದ ಕಾರ್ಯಕ್ರಮಗಳು ಜರುಗಿದವು. ತಾಲೂಕಾಧ್ಯಂತ ತಹಶೀಲ್ದಾರ ಕಛೇರಿ, ತಾ.ಪಂ, ಪ.ಪಂ, ಗ್ರಾ.ಪಂ, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸೇರಿದಂತೆ ವಿವಿಧ ಕಛೇರಿಗಳು ಮತ್ತು ಸಂಘಟನೆಗಳಲ್ಲಿ ಧ್ವಜಾರೋಹಣ ನಡೆಯಿತು.
ಈ ವೇಳೆ ಅಶಪಾಕ ಹವಾಲ್ದಾರ, ಮುದಕಪ್ಪ ಮರಡಿ, ಪ.ಪಂ. ಅಧಿಕಾರಿ ಪ್ರಭಾಕರ ದೊಡಮನಿ, ಕ್ಯೂರೇಟರ್ ರಾಘವೇಂದ್ರ, ಸಿಪಿಐ ಮಹಾಂತೇಶ ಹೊಸಪೇಟ, ಪಿಎಸ್‍ಐ ಪ್ರವೀಣ ಗಂಗೋಳ, ಶ್ರೀಮತಿ ಗಾಯತ್ರಿ ಅಜ್ಜನವರ, ಎಂ.ಬಿ.ಹೆಗಡೆ, ಎಫ್.ಎಂ.ಜಕಾತಿ, ಕೃಷ್ಣಾ ಬಾಳೇಕುಂದರಿ, ಶಂಕರ ಬಡಿಗೇರ, ರಮೇಶ ಮೊಕಾಶಿ, ತಾಲೂಕಿನ ಎಲ್ಲ ಅಧಿಕಾರಿಗಳು, ಪೋಲಿಸ್ ಇಲಾಖೆ, ಪಿಡಬ್ಲೂಡಿ ಸೇರಿದಂತೆ ಪ.ಪಂ. ಗ್ರಾ.ಪಂ ಸದಸ್ಯರು, ಕಿತ್ತೂರು ಮತ್ತು ಸುತ್ತಮುತ್ತಲಿನ ಹಿರಿಯರು, ಗಣ್ಯರು, ಸಾರ್ವಜನಿಕರಿದ್ದರು.