ಚನ್ನಮಲ್ಲೇಶ್ವರ ಶ್ರೀಗಳು ತ್ಯಾಗಿಗಳವರ ಮಹಿಮೆ ಅಪಾರ: ಸಿದ್ದು ಪಾಟೀಲ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಜೂ.15: ತಾಲೂಕಿನ ಇಟಗಾ ಗ್ರಾಮದ ಶಿವಸಿದ್ಧ ಸೋಮೇಶ್ವರ ಯೋಗಾಶ್ರಮದಲ್ಲಿ ದಾಸೋಹ ಮೂರ್ತಿ ಚನ್ನಮಲ್ಲೇಶ್ವರ ತ್ಯಾಗಿಗಳವರ 72ನೇ ಜನ್ಮ ದಿನ ಹಾಗೂ ಬೆಳ್ಳಿ ತೊಟ್ಟಿಲು ಪ್ರವೇಶ ಸಮಾರಂಭದಲ್ಲಿ ಮಾತನಾಡಿದರು.
ಮಠದ ಹಿರಿಯ ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳು ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇಯಾದ ಕೊಡುಗೆ ನೀಡಿದ್ದು ಶ್ರೀಗಳ ಮಾರ್ಗದರ್ಶನ ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ನಾವು ಮಠದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ, ಇಟಗಾ ಮಠವು ಭವ್ಯ ಪರಂಪರೆ ಹೊಂದಿದ್ದು ಹಿರಿಯ ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳು ಸದಾ ಭಕ್ತರ ಉದ್ಧಾರಕ್ಕಾಗಿ ಶ್ರಮಿಸುವ ಜೀವಿಯಾಗಿದ್ದಾರೆ.
ಅವರ ಮಾರ್ಗದರ್ಶನದಲ್ಲಿ ನಾವು ಕೂಡಾ ಮುನ್ನಡೆಯೋಣ. ಗೋಮಾತೆ ರಕ್ಷಣೆ ಗಂಗಾ ಮಾತೆಯ ಸಂರಕ್ಷಣೆ ಜೊತೆಗೆ ನಮ್ಮ ಭಾರತೀಯ ಭವ್ಯ ಪರಂಪರೆಯನ್ನು ಬೆಳೆಸೋಣ ಎಂದರು.
ಅಕ್ಕ ಗಂಗಾಬೀಕಾ ಪಾಟೀಲ ಮಾತನಾಡಿ, ಚನ್ನಮಲ್ಲೇಶ್ವರ ತ್ಯಾಗಿಗಳು ಶ್ರೀಮಠದಲ್ಲಿ ಅನ್ನ ದಾಸೋಹ, ಜ್ಞಾನ ದಾಸೋಹಗಳನ್ನು ಪ್ರಾರಂಭಿಸಿ ಭಕ್ತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುವುದು ನೋಡಿದರೆ ತುಂಬಾ ಹೆಮ್ಮೆಯ ವಿಷಯವಾಗಿದೆ. ಮಠದಲ್ಲಿ ಅನ್ನ ದಾಸೋಹದ ಜೊತೆಗೆ ಪ್ರತಿ ಹುಣ್ಣಿಮೆ ಶಿವಾನುಭವಗೋಷ್ಠಿ ಕಾರ್ಯಕ್ರಮ ಆಯೋಜಿಸುವ ಮೂಲಕ ಶಿವಶರಣರ ಬಸವಾದಿ ಪ್ರಮರ್ಥರ ತತ್ವಾದರ್ಶಗಳನ್ನು ಭಕ್ತರಿಗೆ ತಿಳಿಸುವ ಜ್ಞಾನ ದಾಸೋಹ ಸೇರಿದಂತೆ ಇತ್ಯಾದಿ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿದ್ದು ಶ್ರೀಗಳ ಕಾರ್ಯ ಮೆಚ್ಚುವಂತಹದು ಎಂದರು.
ಹಿರೆಮುನ್ನಳ್ಳಿಯ ಶಂಭುಲಿಂಗ ಶಿವಾಚಾರ್ಯರು, ಭರತನೂರ ಚಿಕ್ಕಗುರು ನಂಜೇಶ್ವರ, ವಿಜಯಪೂರ ಯಾವನಂದ ಗೂರುಜಿ, ರೇವಣಸಿದ್ದಪ್ಪ ಹೆಗ್ಗಣಿ, ಬಸವರಾಜ ಪಾಟೀಲ ಕಲಬುರಗಿ, ಮಲ್ಲಿಕಾರ್ಜುನ ಪಾಟೀಲ, ದಿಗಂಬರ ಸ್ವಾಮಿ, ಮಡಿವಾಳಪ್ಪ ಖೇಣಿ, ಭದ್ರೇಶ ಖೇಣಿ, ಶ್ರಿನಿವಾಸ ರೆಡ್ಡಿ ಮಟಾಟಿ, ಸಾಗರ ನಾರಾಯಣಪೂರ, ಕಂಠಯ್ಯ ಸ್ವಾಮಿ, ಜಯಶ್ರೀ ಚಿದಂಬರವಾವ ಪಾಟೀಲ, ಇಂದ್ರಣ್ಣ ಮೈಲೂರ, ಸುರೇಶ ಪಂಚಾಳ, ಅಶೋಕ ಮಠಪತಿ, ಬಸವರಾಜ ದಿಗಡೆ, ಸಿದ್ದಪ್ಪ ವಾಲಿ, ಅಣ್ಣೆಪ್ಪ ಇಸ್ಲಾಂಪೂರ, ಶಾಂತವೀರ ಸ್ವಾಮಿ ನಾವದಗಿ, ಶರಣಯ್ಯ ಸ್ವಾಮಿ, ಮಲ್ಲಿಕಾರ್ಜುನ ಮೈಲೂರ, ಅನೀಲಕುಮಾರ ಸಿರಮುಂಡಿ, ವಿಜಯಕುಮಾರ ಖೇಣಿ, ಸಿದ್ದು ಕಲ್ಲೂರ, ಬಸವರಾಜ ಶರಣನಗರ, ಸಂಗೀತ ಕಲಾವಿರಾದ ರಾಜಕುಮಾರ ತುಮಕುಂಟಾ, ಶಿವಕುಮಾರ ಚಿಂಚನಸೂರ ಸೇರಿದಂತೆ ರಂಜೋಳ ಖೇಣಿ, ಇಟಗಾ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತಾದಿಗಳು ಹಾಜರಿದ್ದರು. ನೀಲಕಂಠ ಇಸ್ಲಾಂಪೂರ ನಿರೂಪಿಸಿದರು.