ಚನ್ನಬಸವಾನಂದ ಸ್ವಾಮೀಜಿಯವರನ್ನು ಟ್ರಸ್ಟ್‍ನಲ್ಲಿ ಸೇರಿಸಿ, ಸಿದ್ರಾಮೇಶ್ವರ ಸ್ವಾಮೀಜಿ ಉಚ್ಛಾಟಿಸಲು ಒತ್ತಾಯ

ಬಸವಕಲ್ಯಾಣ:ಸೆ.22: ನಗರದ ಬಸವ ಮಹಾಮನೆ ಪರಿಸರದಲ್ಲಿ ಕೂಡಲ ಸಂಗಮದ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ ಅವರ ನೇತೃತ್ವದಲ್ಲಿ ಮುಂದಿನ ತಿಂಗಳ ಅಕ್ಟೋಬರ 28 ಮೂರು ದಿನಗಳ ಕಾಲ ನಡೆಯಲಿರುವ 22ನೇ ಕಲ್ಯಾಣ ಪರ್ವ ಕಾರ್ಯಕ್ರಮದ ಪೂರ್ವ ಸಭೆ ಆಯೋಜಿಸಲಾಗಿತ್ತು. ಆದರೆ ಸಭೆಗೆ ಪ್ರವೇಶ ಕಲ್ಪಿಸದ ಹಿನ್ನಲೆಯಲ್ಲಿ ಕೆಲ ಬಸವ ಭಕ್ತರಿಂದ ಪ್ರತಿಭಟನೆ ನಡೆದ ಪ್ರಸಂಗ ಜರುಗಿತು.
ಕಲ್ಯಾಣ ಪರ್ವದ ಪೂರ್ವ ಸಿದ್ಧತೆಗಾಗಿ ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಮಂಗಳವಾರ ಮಾತೆ ಗಂಗಾದೇವಿ ಅವರ ನೇತೃತ್ವದಲ್ಲಿ ಸಭೆ ನಡೆದರೆ, ಬಸವ ಮಹಾನೆ ಆವರಣದ ಹೊರಗಡೆ ಬಸವ ಧರ್ಮ ಪೀಠದಿಂದ ಉಚ್ಚಾಟಿತ ಜಗದ್ಗುರು ಶ್ರೀ ಚನ್ನಬಸವಾನಂದ ಮಹಾಸ್ವಾಮೀಜಿ ಬೆಂಬಲಿಗರಿಂದ ಹಾಗೂ ರಾಷ್ಟ್ರೀಯ ಬಸವ ದಳ ಮತ್ತು ಕೆಲ ಬಸವ ಪರ ಸಂಘಟನೆಯ ಪದಾಕಾರಿಗಳಿಂದ ಪ್ರತಿಭಟನೆ ನಡೆಯಿತು.
ರಾಷ್ಟ್ರೀಯ ಬಸವದಳ ಮುಖಂಡ ಶಿವರಾಜ ಪಾಟೀಲ ಅತಿವಾಳ, ಮಾತೆ ಸತ್ಯಕ್ಕ, ಸಾಹಿತಿ ಓಂಪ್ರಕಾಶ ರೋಟ್ಟೆ ಸೇರಿದಂತೆ ಹಲವಾರು ಬಸವಾಭಿಮಾನಿಗಳು ಸೇರಿ ಮಾತೆ ಗಂಗಾದೇವಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಧರಣಿ ನಡೆಸಿದರು.
ಕೂಡಲಸಂಗಮದ ಲಿಂಗೈಕ್ಯ ಜಗದ್ಗುರು ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ ಸ್ಥಾಪಿಸಿದ ಬಸವ ಧರ್ಮ ಪೀಠದ ಅಡಿಯಲ್ಲಿ ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಅನೇಕ ಪೀಠಗಳನ್ನು ಸ್ಥಾಪಿಸುವ ಜತೆಗೆ ರಾಷ್ಟ್ರೀಯ ಬಸವದಳ ಸಂಘಟಿಸಿ ಬಸವ ತತ್ವ ಪ್ರಚಾರ, ಪ್ರಸಾರ ಮಾಡುವಲ್ಲಿ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಶ್ರಮ ಸಾಕಷ್ಟು ಇದೆ.
ಆದರೆ ಮಾತೆ ಮಹಾದೇವಿ ಅವರು ಲಿಂಗೈಕ್ಯರಾದ ನಂತರ ಮಾತೆ ಗಂಗಾದೇವಿ ಅವರ ನೇತೃತ್ವದ ಕೆಲವರು ಚನ್ನಬಸವಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಅಕ್ರಮವಾಗಿ ಉಚ್ಚಾಟಿಸಿ ಅವರನ್ನು ಹೋರಗಿಟ್ಟು ಕಾರ್ಯಕ್ರಮ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ಚನ್ನಬಸವಾನಂದ ಸ್ವಾಮೀಜಿ ಅವರಿಗೆ ಪೀಠದ ಟ್ರಸ್ಟ್‍ನಲ್ಲಿ ಸೇರಿಸಿಕೊಳ್ಳಬೇಕು ಎಂದು ಈಗಾಗಲೇ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ. ಆದರೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಾತೆ ಗಂಗಾದೇವಿ ಅವರು ಶ್ರೀ ಚನ್ನಬಸವಾನಂದ ಸ್ವಾಮೀಜಿ ಅವರನ್ನು ಹೊರಗಿಟ್ಟು ಕಾರ್ಯಕ್ರಮ ನಡೆಸುವುದು ಸಮಂಜಸವಲ್ಲ ಎಂದು ಪ್ರತಿಭಟನಾಕಾರರು ತಮ್ಮ ಅಸಮಧಾನ ಹೊರ ಹಾಕಿದರು.

ಧರಣಿ ನಿರತ ಮಾತೆ ಸತ್ಯಕ್ಕ, ಶಿವರಾಜ ಪಾಟೀಲ ಅತಿವಾಳ, ಓಂಪ್ರಕಾಶ್ ರೋಟ್ಟೆ ಸೇರಿದಂತೆ ಸುಮಾರು 20ಕ್ಕೂ ಅಕ ಜನರನ್ನು ಪೆÇಲೀಸರು ಬಂಸಿ ನಗರ ಪೆÇಲೀಸ್ ಠಾಣೆಗೆ ಕರೆದುಕೊಂಡು ಹೋದ ಪ್ರಸಂಗ ಜರುಗಿತು. ನಂತರ ಕೆಲ ಸಮಯದ ನಂತರ ಬಿಡುಗಡೆಗೊಳಿಸಿದರು.

ಈ ವೇಳೆ ರಾಷ್ಟ್ರೀಯ ಬಸವದಳ ಮುಖಂಡ ಶಿವರಾಜ ಪಾಟೀಲ ಅತಿವಾಳ ಮಾತನಾಡಿ, ಬಸವ ಮಹಾಮನೆಯಲ್ಲಿ 22ನೇ ಕಲ್ಯಾಣ ಪರ್ವದ ಪೂರ್ವ ಸಿದ್ದತಾ ಸಭೆ ಆಯೋಜಿಸಲಾಗಿದೆ ಎಂದು ತಿಳಿದು ಸಭೆಯಲ್ಲಿ ಭಾಗವಹಿಸಲು ಆಗಮಿಸಿದೆವು ಆದರೆ ಮಾತೆ ಗಂಗಾದೇವಿ ಅವರು ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ ಪೊಲೀಸರನ್ನು ಮುಂದಿಟ್ಟುಕೊಂಡು ನಮ್ಮನ್ನು ಸಭೆಗೆ ಬಾರದಂತೆ ತಡೆ ಹಿಡಿದಿದ್ದಾರೆ. ಬಸವ ಧರ್ಮ ಪೀಠ ಕಟ್ಟಲು ನಾವೆಲ್ಲ ಈ ಹಿಂದೆ ಲಿಂ. ಡಾ. ಮಾತೆ ಮಹಾದೇವಿ ಅವರ ಜೊತೆಗೂಡಿ ಸಾಕಷ್ಟು ಶ್ರಮ ವಹಿಸಿದ್ದೇವೆ ಆದರೆ ಮಾತಾಜಿ ಅವರ ಲಿಂಗೈಕ್ಯರಾದ ನಂತರ ಪೂಜ್ಯ ಸಿದ್ರಾಮೇಶ್ವರ ಸ್ವಾಮೀಜಿ ಸೇರಿದಂತೆ ಕೆಲವರು ಮಾತೆ ಗಂಗಾದೇವಿ ಅವರನ್ನು ಮುಂದಿಟ್ಟುಕೊಂಡು ಬಸವ ಧರ್ಮ ಪೀಠ ಹಾಳು ಮಾಡುತ್ತಿದ್ದಾರೆ.
ಅಕ್ರಮ ಹಣಕಾಸಿನ ವ್ಯವಹಾರ, ವೆಭಿಚಾರ ಸೇರಿದಂತೆ ವಿವಿಧ ರೀತಿಯ ಅಕ್ರಮ, ಅನೈತಿಕ ಚುಟುವಟಿಕೆ ನಡೆಸುತ್ತಿರುವ ಸಿದ್ರಾಮೇಶ್ವರ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಛಾಟಿಸಬೇಕು ಮತ್ತು ಚನ್ನಬಸವಾನಂದ ಸ್ವಾಮೀಜಿ ಸೇರಿದಂತೆ ಈ ಹಿಂದೆ ಬಸವ ಧರ್ಮ ಪೀಠ ಕಟ್ಟಲು ಶ್ರಮಿಸಿದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಮಾತೆ ಗಂಗಾದೇವಿ ಅವರಿಗೆ ಒತ್ತಾಯಿಸಿದರು.
ಮಾತೆ ಸತ್ಯಕ್ಕ ಮಾತನಾಡಿ, ಬಸವ ಧರ್ಮ ಪೀಠ ಕಟ್ಟಲು ಶ್ರಮಿಸಿದ ಅವರಿವರೆನ್ನದೇ ಎಲ್ಲರನ್ನು ಕರೆದುಕೊಂಡು 22 ನೇ ಕಲ್ಯಾಣ ಪರ್ವ ಕಾರ್ಯಕ್ರಮ ಮಾಡಬೇಕು ಎನ್ನುವದು ನಮ್ಮೆಲ್ಲರ ಆಶಯವಾಗಿದೆ. ಇಲ್ಲವಾದಲ್ಲಿ ಇದರ ವಿರುದ್ದ ನಿರಂತರವಾಗಿ ಹೋರಾಟ ಮುಂದುವರೆಸಲಾಗುವದು ಎಂದು ಎಚ್ಚರಿಕೆ ನೀಡಿದರು.