ಚನ್ನಬಸಪ್ಪ ಕುಳಗೇರಿ ಪುಸ್ತಕ ಬಿಡುಗಡೆಗೆ ವೆಂಕಯ್ಯ ನಾಯ್ಡುಗೆ ಆಹ್ವಾ£

ಜೇವರ್ಗಿ:ನ.13: ಬೆಂಗಳೂರಿನ ರಾಜಭವನದಲ್ಲಿ ಭಾರತದ ಮಾಜಿ ಉಪರಾಷ್ಟ್ರಪತಿಗಳಾದ ಶ್ರೀ ಎಂ. ವೆಂಕಯ್ಯ ನಾಯ್ಡು ಅವರಿಗೆ ಜೇವರ್ಗಿ ಶಾಸಕ ಡಾಕ್ಟರ್ ಅಜಯ್ ಸಿಂಗ್ ಅವರು ಜೇವರ್ಗಿ ಕ್ಷೇತ್ರದ ಹೈದರಾಬಾದ್ ಪ್ರಾಂತ್ಯದ ವಿಮೋಚನಾ ಚಳವಳಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ.ಚನ್ನಬಸಪ್ಪ ಕುಳಗೇರಿಯವರ ಬದುಕು ಮತ್ತು ಹೋರಾಟದ ಸ್ಮರಣೀಯ ಪುಸ್ತಕ ಡಿಸೆಂಬರ್ 2022 ರಲ್ಲಿ ಐತಿಹಾಸಿಕ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಎ.ಕೆ.ರಾಮೇಶ್ವರ, ಅಮರನಾಥ ಕುಲಗೇರಿ, ಶಿವನಗೌಡ ಪಾಟೀಲ ಹಂಗರಗಿ ,ಸಿ.ಎಸ್ ಮಾಲಿಪಾಟೀಲ ರವರು ಉಪಸ್ಥಿತರಿದ್ದರು.