ಚನ್ನಬಸಪ್ಪ ಕುಳಗೇರಿ ಈ ನೆಲದ ವೀರ ಪುತ್ರ

ಕಲಬುರಗಿ:ಸೆ.16:ಬಾಲ್ಯದಿಂದಲೇ ಸ್ವಾತಂತ್ರ್ಯ ಹೋರಾಟದ ಚಳವಳಿ ಪ್ರಾರಂಭಿಸಿದ ಚನ್ನಬಸವ ಕುಳಗೇರಿ ಈ ನೆಲ ವೀರ ಪುತ್ರ ಎಂದು ಸಾಹಿತಿ -ಪತ್ರಕರ್ತರ ಮಹಿಪಾಲ ರೆಡ್ಡಿ ಮುನ್ನೂರ್ ಹೇಳಿದರು.
ನಗರದ ಸರಕಾರಿ ಡಿಗ್ರಿ ಕಾಲೇಜು (ಸ್ವಾಯತ್ತ) ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣ ದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಹೈದ್ರಾಬಾದ್ ಕರ್ನಾಟ ವಿಮೋಚನೆಯ ಹೋರಾಟಗಾರರ ಹಾದಿಯಲ್ಲಿ ‘ ಚನ್ನಬಸಪ್ಪ ಕುಳಗೇರಿ ಅವರ ಕುರಿತು ಉಪನ್ಯಾಸ ನೀಡಿದ ಅವರು, ರಜಾಕಾರರ ದೌರ್ಜನ್ಯಕ್ಕೆ ರೋಸಿಹೋಗಿ, ಭಾರತ ಒಕ್ಕೂಟಕ್ಕೆ ಹೈದ್ರಾಬಾದ್ ಸಂಸ್ಥಾನ ವಿಲೀನಗೊಳಿಸುವ ನಿಟ್ಟಿನಲ್ಲಿ ಸಿಂದಗಿ, ಕಕ್ಕಳಮೇಲಿ ಕ್ಯಾಂಪಿನ ಮೂಲಕ ಚಳವಳಿ ಮಾಡಿದ್ದನ್ನು ಮಹಿಪಾಲರೆಡ್ಡಿ ಸ್ಮರಿಸಿದರು.
ಈ ಕಾರ್ಯಕ್ರಮವನ್ನು ಶ್ರೀ ಅಮರನಾಥ ಕುಳಗೇರಿ ರವರು ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಸರಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ,ಸವಿತಾ ತಿವಾರಿ ವಹಿಸಿದ್ದರು, ಮುಖ್ಯ ಅಥಿತಿಗಳಾದ ಶ್ರೀ ನೀಲಕಂಠರಾವ ಮೂಲಗೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಸುರೇಶ ಬಡಿಗೇರ,ವಿಜಯಕುಮಾರ ಸಾಲಿಮಠ,ಬಸವರಾಜ ಬಿರಬಿಟ್ಟಿ, ಶಾಮರಾವ ರ್ಸೂನ,ಆಗಮಿಸಿದರು, ಪ್ರಾಸ್ತಾವಿಕ ನುಡಿಯನ್ನು ಮಂಜುನಾಥ ನಾಲವಾರಕರ್ ಮತಾನಾಡಿ ಒಕ್ಕೂಟದಿಂದ ಸೇ,13ರಿಂದ 16 ರವರಿಗೆ ಕಲಬುರಗಿ ನಗರದ ವಿವಿಧ ಕಾಲೇಜುಗಳಲ್ಲಿ ವಿಮೋಚನಾ ಸಪ್ತಾಹ, ವಿಮೋಚನಾ ಹೋರಾಟಗಾರ ಹೋರಾಟದ ಹಾದಿ ವಿಚಾರ ಗೋಷ್ಠಿಯನ್ನು ಹಮ್ಮಿಕೊಂಡಿದೆ ಈ ಭಾಗದ ಐತಿಹಾಸವನ್ನು ವಿದ್ಯಾರ್ಥಿಗಳಿಗೆ ಪಠ್ಯವಾಗಲಿ ಎಂದು ಮಾತನಾಡಿದರು, ಈ ಸಂದರ್ಭದಲ್ಲಿ ಸಚೀನ ಫರಹತಾಬಾದ, ಗೋಪಾಲ ನಾಟೀಕಾರ,ಶರಣು ಹೋಸಮನಿ,ಮಲ್ಲಿಕಾರ್ಜುನ ಕಿಳ್ಳಿ, ಸಂತೋಷ ಚೌಧರಿ, ಆನಂದ ತೇಗನೂರು,ಭಾಗವಹಿಸಿದರು.