ಚನ್ನಪ್ಪನಹಳ್ಳಿ ಅತಿವೃಷ್ಟಿ ಮಳೆಗೆ ವಿದ್ಯುತ್ ಪರಿಕರಗಳು ನಷ್ಟ     

   
ಸಂಜೆವಾಣಿ ವಾರ್ತೆ                        
ಕುಕನೂರು, ಸೆ.19: ತಾಲೂಕಿನ ಚನ್ನಪ್ಪನಹಳ್ಳಿ ಗ್ರಾಮದ ರೈತ ಪ್ರಕಾಶ ದೇಸಾಯಿಯವರ ತೋಟದ ಬಾವಿಯಲ್ಲಿನ ವಿದ್ಯುತ್ ಪರಿಕರಗಳು ಈಚೆಗೆ ಸುರಿದ ಅತಿವೃಷ್ಟಿ ಮಳೆಗೆ ಕೆಲವು ಪರಿಕರಗಳು ಜಗಮ್ ಆಗಿದ್ದರೆ ಮತ್ತೆ ಕೆಲವು ಬಾವಿಯಲ್ಲಿ ಮುಳುಗಿವೆ. ಕೃಷಿಯನ್ನೇ ನಂಬಿದ ರೈತರ ಲಕ್ಷಾಂತರ ರೂ.ಗಳ ಮೌಲ್ಯದ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಷ್ಟ ಪರಿಹಾರ ಒದಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ …                          

Attachments area