
ವಿಜಯಪುರ:ಮಾ.5: ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಚನ್ನಗಿರಿ ಶಾಸಕ, ಕೆ.ಎಸ್.ಐ.ಡಿ.ಎಲ್. ಅಧ್ಯಕ್ಷ ಮಾಡಾಳ ವಿರೂಪಾಕ್ಷಪ್ಪ ರವರನ್ನು ಬಂಧಿಸುವ ಹಾಗೂ ತಕ್ಷಣ ರಾಜ್ಯ ಸರಕಾರವನ್ನು ವಜಾಗೊಳಿಸಲು ಆಗ್ರಹಿಸಿ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಘನವೆತ್ತ ರಾಜ್ಯಪಾಲರಿಗೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಮನವಿ ಅರ್ಪಿಸಿತು.
ಪ್ರತಿಭಟನೆಯನ್ನುದ್ದೇಶಿಸಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ. ಪಾಟೀಲ ಅವರು ಚನ್ನಗಿರಿ ಶಾಸಕ, ಕೆ.ಎಸ್.ಐ.ಡಿ.ಎಲ್. ಅಧ್ಯಕ್ಷ ಮಾಡಾಳ ವಿರೂಪಾಕ್ಷಪ್ಪ ರವರು ಮತ್ತು ಅವರ ಪುತ್ರ ಪ್ರಶಾಂತ ಮಾಡಾಳ ವಿರೂಪಾಕ್ಷಪ್ಪ ರವರು ಲೋಕಾಯುಕ್ತ ದಾಳಿಯಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ. ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರದ ಮುಖವಾಡ ಕಳಚಿಬಿದ್ದಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಇಡೀ ಸಚಿವ ಸಂಪುಟವೇ ಹಗಲು ದರೋಡೆಗೆ ಇಳಿದಿದ್ದು, ಕಾಂಗ್ರೆಸ್ ಪಕ್ಷ ಇದನ್ನು ಬಲವಾಗಿ ಖಂಡಿಸುತ್ತದೆ.
ಲೋಕಾಯುಕ್ತಕ್ಕೆ ಹಲವಾರು ಪ್ರಕರಣಗಳಲ್ಲಿ ಹಲವಾರು ದೂರುಗಳು ಬಂದ ಹಿನ್ನೆಲೆ ಚನ್ನಗಿರಿಯ ಹಾಲಿ ಬಿಜೆಪಿ ಶಾಸಕರು ಮತ್ತು ಕೆ.ಎಸ್.ಐ.ಡಿ.ಎಲ್. ಅಧ್ಯಕ್ಷ ಮಾಡಾಳ ವಿರೂಪಾಕ್ಷಪ್ಪ ರವರ ಕಚೇರಿ ಹಾಗೂ ಅವರ ಪುತ್ರ ಪ್ರಶಾಂತ ಮಾಡಾಳ ವಿರೂಪಾಕ್ಷಪ್ಪ ಸರಕಾರಿ ಅಧಿಕಾರಿಯಾಗಿದ್ದು, ಸದರಿಯವರುಗಳ ಕಚೇರಿಗೆ ರೇಡ್ ಮಾಡಿದಾಗ 40% ಕಮಿಷನ್‍ರಂತೆ 40.00 ಲಕ್ಷ ರೂ. ರೋಖ ಹಣ ಸಾಕ್ಷಿ ಸಮೇತ ಸಿಕ್ಕಿದ್ದು, ಅದರೊಂದಿಗೆ ಶಾಸಕರ ಹಾಗೂ ಅವರ ಪುತ್ರನ ಮನೆಯಲ್ಲಿ ಸುಮಾರು 8.12 ಕೋಟಿ ರೂ. ರೋಖ ಹಣ, ಅದರ ಜೊತೆಗೆ ಅಪಾರ ಪ್ರಮಾಣದ ಚಿನ್ನ-ಬೆಳ್ಳಿ ಸಿಕ್ಕಿದ್ದು, ಲೋಕಾಯುಕ್ತ ಅಧಿಕಾರಿಗಳು ಅದನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೂ ಘನ ಸರಕಾರದ ಮುಖ್ಯಮಂತ್ರಿಗಳು ಹಾಗೂ ಕಾನೂನು ಮಂತ್ರಿಗಳು ಲಂಚ ಪಡೆದ ಪ್ರಕರಣದ ಕುರಿತು ಬಾಲಿಶತನದ ಹೇಳಿಕೆ ನೀಡುತ್ತಿರುವುದು ದುರಾದೃಷ್ಟಕರವಾಗಿದೆ.
“ನಾನೂ ತಿನ್ನಲ್ಲ, ಇತರರಿಗೂ ತಿನ್ನಲು ಬಿಡಲ್ಲ”, ಭ್ರಷ್ಟಮುಕ್ತ ಸರಕಾರ ನೀಡುತ್ತೇವೆ ಎಂಬ ಸುಳ್ಳು ಭರವಸೆ ಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರೇ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ಮಾನ್ಯ ಪ್ರಧಾನಿಗಳೇ ನಿಮಗಾದರೂ ನೈತಿಕತೆ ಇದ್ದರೆ ತಕ್ಷಣ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ರಾಜೀನಾಮೆ ಪಡೆದು ತಮ್ಮ ನೈತಿಕತೆಯನ್ನು ಸಾಬೀತುಪಡಿಸಿ ಎಂದು ಆಗ್ರಹಿಸುತ್ತಾ ಇಂತಹ ಬೃಹತ್ ಮಟ್ಟದ ಭ್ರಷ್ಟಾಚಾರಕೂಪದ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಭಾರಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ರವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ಸಿಕ್ಕಿಬಿದ್ದ ತಪ್ಪಿತಸ್ಥ ಚನ್ನಗಿರಿ ಶಾಸಕ, ಕೆ.ಎಸ್.ಐ.ಡಿ.ಎಲ್. ಅಧ್ಯಕ್ಷ ಮಾಡಾಳ ವಿರೂಪಾಕ್ಷಪ್ಪ ರವರನ್ನು ಕೂಡಲೇ ಬಂಧಿಸಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಮಾಜಿ ಶಾಸಕ ವಿಠ್ಠಲ ಕಟಕಧೋಂಡ, ಮುಖಂಡರುಗಳಾದ ಅಶೋಕ ಮನಗೂಳಿ, ಡಾ.ಪ್ರಭುಗೌಡ ಪಾಟೀಲ, ಸುರೇಶ ಗೊಣಸಗಿ ಮುಂತಾದವರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಜಿಲ್ಲಾ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಚಂದ್ರಕಾಂತ ಶೆಟ್ಟಿ, ಇಲಿಯಾಸ ಬೋರಾಮಣಿ, ಸಂಗನಗೌಡ ಹರನಾಳ, ಅಫ್ಜಲ್ ಜಾನವೆಕರ, ಕಾಂಗ್ರೆಸ್ ಮುಖಂಡ ಡಿ.ಎಲ್. ಚವ್ಹಾಣ, ನಗರ ಬ್ಲಾಕ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಶಾಹಜಾ ದುಂಡಸಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಬ್ಲಾಕ ಅಧ್ಯಕ್ಷರುಗಳಾದ ಆರತಿ ಶಹಾಪೂರ, ಬಶೀರ ಶೇಠ್, ಅಯುಬ ದೇವರಮನಿ, ಬಾಳನಗೌಡ ಪಾಟೀಲ, ಶಾಹಜಾ ಮುಲ್ಲಾ, ರಫೀಕ ಪಕಾಲೆ, ಗುರು ತಾರನಾಳ, ಜಾವೀದ ಮೋಮಿನ, ಈರನಗೌಡ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ಎಂ.ಜಿ. ಯಂಕಂಚಿ, ರಾಕೇಶ ಕಲ್ಲೂರ, ವಿಜಯಕುಮಾರ ಘಾಟಗೆ, ಹೊನಮಲ್ ಸಾರವಾಡ, ಅಶೋಕ ಪಾಟೀಲ, ಅಸ್ಫಾಕ ಮನಗೂಳಿ, ಹಾಜಿಲಾಲ ದಳವಾಯಿ, ಶರಣಪ್ಪ ಯಕ್ಕುಂಡಿ, ಅಂಗ ಘಟಕಗಳ ಅಧ್ಯಕ್ಷರಾದ ಅಮಿತ ಚವ್ಹಾಣ, ಮಹ್ಮದಹನೀಫ ಮಕಾನದಾರ, ಪಯಾಜ ಕಲಾದಗಿ, ರಮೇಶ ಗುಬ್ಬೇವಾಡಿ, ಆನಂದ ಜಾಧವ, ರಾಜೇಶ್ವರಿ ಚೋಳಕೆ, ದೀಪಾ ಕುಂಬಾರ, ಗಂಗೂಬಾಯಿ ಧುಮಾಳೆ, ಸರಿತಾ ನಾಯಕ, ಹಮಿದಾ ಪಟೇಲ, ಮಹಾನಗರಪಾಲಿಕೆ ಸದಸ್ಯರಾದ ಜಮೀರಅಹ್ಮದ ಬಾಂಗಿ, ದಿನೇಶ ಹಳ್ಳಿ, ಅಪ್ಪು ಪೂಜಾರಿ, ಶಫೀಕ್ ಮನಗೂಳಿ, ಆಸೀಫ್ ಶಾನವಾಲೆ, ಕೆ.ಎಸ್. ಪಾರಶೆಟ್ಟಿ, ಹಾಜಿ ಪಿಂಜಾರ, ತಾಜುದ್ದೀನ ಖಲೀಫಾ, ಬಾಬುಸಾಬ ಯಾಳವಾರ, ಎಂ.ಎ. ಬಕ್ಷಿ, ಮೊಹಮ್ಮದ ಮುಲ್ಲಾ, ಮುತ್ತಣ್ಣ ಭೋವಿ, ಸಂತೋಷ ಹರನಾಳ, ಪಿರೋಜ ಶೇಖ, ಪ್ರಕಾಶ ಕಟ್ಟಿಮನಿ, ರಾಜು ಸಿಂಗೆ ಮುಂತಾದವರು ಉಪಸ್ಥಿತರಿದ್ದರು.