ಚನ್ನಗಿರಿ ಶಾಸಕರಿಂದ ವಿಡಿಯೋ ಸಂವಾದ

ಚನ್ನಗಿರಿ.ಮೇ.೩೧;  ಶಾಸಕ ಮಾಡಾಳ್ ವಿರುಪಾಕ್ಷಪ್ಪ  ತಹಶೀಲ್ದಾರ್ ಕಚೇರಿಯಲ್ಲಿ ಎಲ್ಲಾ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.ಈ ವೇಳೆ ಅಧಿಕಾರಿಗಳಿಗೆ ಸಲಹೆ ನೀಡುತ್ತಾ ಮಾತನಾಡಿದ ಅವರು ಈಗಾಗಲೇ ಎಲ್ಲಾ ಅಧಿಕಾರಿಗಳ ಸಭೆಯ  ಕರೆದು ಕೊರೋನವನ್ನು ಹೇಗೆ ತಡೆಗಟ್ಟುವುದು ಎಂಬ ಸಲಹೆ ಸೂಚನೆ ಮೇರೆಗೆ ಎಲ್ಲಾ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ತಾಲೂಕಿನಲ್ಲಿ ಕೋರೋನ ಇಳಿಕೆಯನ್ನು ಕಾಣುತ್ತ ಬರುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಇರುವುದರಿಂದ ಗ್ರಾಮಪಂಚಾಯತಿಯ ಪಿಡಿಒಗಳ ಮುಖಾಂತರ ಆ ಗ್ರಾಮಪಂಚಾಯಿತಿಯಲ್ಲಿ ಎಷ್ಟು ಪ್ರಕರಣಗಳಿವೆ ಅವುಗಳನ್ನು ಕೋವಿಡ್ ಸೆಂಟರಿಗೆ ಕಳಿಸುವಂತೆ ಕೆಲಸವನ್ನು ಮಾಡಬೇಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಎಲ್ಲಾ ಹಳ್ಳಿಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಜನರಿಗೆ ಮನೆಯಿಂದ ಹೊರಗೆ ಓಡಾಡದ ರೀತಿಯಲ್ಲಿ ಸೂಚನೆಯನ್ನು ನೀಡಬೇಕು ಅಧಿಕಾರಿಗಳು ಶ್ರಮಪಟ್ಟು ಕೆಲಸ ಮಾಡಿದರೆ ಕೊರೋನಾ  ಮುಕ್ತ ತಾಲ್ಲೂಕುಮಾಡಲು ಸಾಧ್ಯ ಎಂದು ಹೇಳಿದರು.ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಕಾರ್ಯನಿರ್ವಣಾಧಿಕಾರಿ ಪ್ರಕಾಶ್ ಇದ್ದರು.