ಚನ್ನಗಿರಿ ತಾಲೂಕಿನಿಂದ ೧೦೦ ಬಸ್ ಗಳಲ್ಲಿ ಜನಾಗಮನ

ಚನ್ನಗಿರಿ. ಆ.೨; ದಾವಣಗೆರೆಯಲ್ಲಿ ನಾಳೆ ನಡೆಯುತ್ತಿರುವ ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ಚನ್ನಗಿರಿ ತಾಲ್ಲೂಕಿನಿಂದ ಸುಮಾರು ೧೦೦ ವಾಹನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಹೊದಿಗೆರೆ ರಮೇಶ್ ಹೇಳಿದರು.ಖಾಸಗಿ ಬಸ್,ಮಿನಿ ಬಸ್ ,ಕ್ರೂಸರ್,ಟೆಂಪೋಟ್ರಾವಲ್ಸ್ ಹಾಗೂ ಖಾಸಗಿ ಶಾಲಾವಾಹನಗಳಲ್ಲಿ ಜನರನ್ನು ಕರೆತರಲಾಗುತ್ತಿದೆ.ಪ್ರತಿಬೂತ್ ನಿಂದ ಸುಮಾರು ೫೦ ಜನ ಆಗಮಿಸಲಿದ್ದಾರೆ. ಚನ್ನಗಿರಿ ತಾಲೂಕಿನಲ್ಲಿನಿಂದ ಸುಮಾರು ೮ ರಿಂದ ೯ ಸಾವಿರ ಜನ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

Attachments area