ಚನ್ನಗಿರಿಯಿಂದ ಅಮರನಾಥ ಯಾತ್ರೆಗೆ ತೆರಳಿದ 8 ಸುರಕ್ಷವಾಗಿದ್ದಾರೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೧೧ : ಶಾಸಕರು ತಮ್ಮ ಕ್ಷೇತ್ರದ ಜನರ ಬಗ್ಗೆ ಎಷ್ಟು ಕಾಳಜಿವಹಿಸುತ್ತಾರೆ ಎಂಬುದಕ್ಕೆ ನಿದರ್ಶನ ಬಸವರಾಜು ವಿ ಶಿವಗಂಗಾ ಅವರು ಎಂದರೆ ತಪ್ಪಾಗಲ್ಲ. ಸದಾ ಕ್ಷೇತ್ರ ಅಭಿವೃದ್ಧಿ, ಜನರ ಸಮಸ್ಯೆ ಹೀಗೆ ಯೋಚನೆ ಮಾಡುವ ಶಾಸಕರು, ಅಮರನಾಥ ಯಾತ್ರೆಗೆ ತೆರಳಿದ ಕ್ಷೇತ್ರ ಜನರ ಬಗ್ಗೆಯೂ ಕಾಳಜಿ ಹೊಂದಿದ್ದಾರೆ. ಚನ್ನಗಿರಿ ಕ್ಷೇತ್ರದಿಂದ ಈ ಬಾರಿ ಎಷ್ಟು ಮಂದಿ ತೆರಳಿದ್ದಾರೆ ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಅವರನ್ನ ಫೋನ್ ಕರೆ ಮೂಲಕ ಸಂಪರ್ಕಿಸಿದ್ದಾರೆ. ಕ್ಷೇತ್ರದಿಂದ ಅಮರನಾಥ ಯಾತ್ರೆಗೆ ತೆರಳಿದ್ದವರನ್ನ ಸಂಪರ್ಕ ಮಾಡಿ ಅವರ ಯೋಗಾಕ್ಷೇಮ ವಿಚಾರಿಸಿದ್ದಾರೆ. ಅಮರನಾಥ ಸೇರಿದಂತೆ ಉತ್ತರ ಭಾರತ ಪ್ರವಾಸದಲ್ಲಿವರಿಗೆ ಶುಭ ಕೋರಿ ಯಾವುದೇ ಸಮಯದಲ್ಲಿ ನಿಮಗೆ ಸಣ್ಣ ಸಮಸ್ಯೆಯಾದರೂ ನನಗೆ ನೇರವಾಗಿ ಫೋನ್ ಕರೆ ಮಾಡಿ ಸಂಪರ್ಕಿಸಿ ಎಂದು ತಿಳಿಸಿದ್ದಾರೆ. ಕ್ಷೇತ್ರದಿಂದ ಅಜ್ಜಿಹಳ್ಳಿಯ ಪ್ರಕಾಶ್, ವಸಂತ ಕುಮಾರ್ ರೇವಣ್ಣ, ಆದಿತ್ಯ, ಪ್ರಹ್ಲಾದ್ , ನಲ್ಲೂರಿನ ಸತೀಶ್, ಚನ್ನಗಿರಿ ಪಟ್ಟಣದ ರಂಗಯ್ಯ, ತಿಪ್ಪಗೊಂಡನಹಳ್ಳಿಯಿಂದ ಮಂಜಯನಾಥ್ ಡಿಎಂ. ಹಳ್ಳಿಹಾಳು( ಪೆನ್ನಸಮುದ್ರ) ಗ್ರಾಮದ ಜಿ ಎಸ್ ನಾಗರಾಜು ಅವರು ಇದೇ ಜು. 7 ರಂದು ಶ್ರೀಗರಕ್ಕೆ ತೆರಳಿ ಅಲ್ಲಿಂದ ಅಮರನಾಥಕ್ಕೆ ತೆರಳಿ ದೇವರ ದರ್ಶನ ಪಡೆದು ಶ್ರೀನಗರಕ್ಕೆ ಮೂಲಕ ಕರ್ನಾಟಕಕ್ಕೆ ವಾಪಾಸ್ ಬರುತ್ತಿದ್ದಾರೆ.