ಚನ್ನಗಿರಿ;ಮತಣಿಕೆಗೆ ಬಿಗಿ ಭದ್ರತೆ

ಚನ್ನಗಿರಿ.ಡಿ.೩೦;  ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಕಾರ್ಯವು  ಚನ್ನಗಿರಿ ಜೂನಿಯರ್ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಯಿಂದ ವಿಧ್ಯುಕ್ತವಾಗಿ ಆರಂಭವಾಯಿತು.  ಮತ ಎಣಿಕೆ ಕಾರ್ಯವು ಶಾಂತಿಯುತವಾಗಿತ್ತು. ಎಣಿಕೆ ಕೇಂದ್ರಗಳ ಸುತ್ತ ಬಿಗಿಪೊಲೀಸ್ ಪಹರೆ ಹಾಕಲಾಗಿತ್ತು.ಚುನಾವಣಾ ಆಯೋಗ ವಿತರಿಸಿದ್ದ ಪಾಸ್ ಹೊಂದಿದವರಿಗೆ ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಕಲ್ಪಿಸಲಾಗಿತ್ತು. ಆಯಾ ಗ್ರಾಪಂ ಮತ ಎಣಿಕೆ ನಡೆಯುವ ವೇಳೆ ಅಭ್ಯರ್ಥಿಗಳ ಏಜೆಂಟ್ ಗಳನ್ನು ಎಣಿಕೆ ಕೊಠಡಿಯೊಳಗೆ ಬಿಡಲಾಗುತ್ತಿತ್ತು. ಕೊಠಡಿಯೊಳಗೆ ಮೊಬೈಲ್ ಬಳಕೆ ನಿರ್ಬಂಧಿಸಲಾಗಿತ್ತು.ಮತ ಎಣಿಕೆ ಕೇಂದ್ರಗಳ ಹೊರ ಭಾಗಗಳಲ್ಲಿ ಆಯಾ ಗ್ರಾಮಗಳ ಫಲಿತಾಂಶ ಹೊರ ಬೀಳುತ್ತಿದ್ದಂತೆ, ವಿಜೇತ ಅಭ್ಯರ್ಥಿ ಮತ್ತವರ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟುತ್ತಿತ್ತು.