ಚನಾ ಮಸಾಲ

ಬೇಕಾಗುವ ಸಾಮಗ್ರಿಗಳು

*ಕಾಬೂಲ್ ಕಡಲೇಕಾಳು – ೧ ಕಪ್
*ಒಣ ಕೊಬ್ಬರಿ ತುರಿ – ೧/೨ ಕಪ್
*ಶುಂಠಿ ಬೆಳುಳ್ಳಿ ಪೇಸ್ಟ್ – ೧ ಚಮಚ
*ಕಸೂರಿ ಮೇಥಿ – ೧ ಚಮಚ
*ಹಸಿರು ಮೆಣಸಿನಕಾಯಿ – ೩
*ಅಚ್ಚಖಾರದ ಪುಡಿ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಜೀರಿಗೆ ಪುಡಿ – ೧ ಚಮಚ
*ಗರಂ ಮಸಾಲ – ೧ ಚಮಚ
*ಟೊಮೆಟೊ ಸಾಸ್ – ೧ ಚಮಚ
*ಕೊತ್ತಂಬರಿ ಸೊಪ್ಪು – ೨ ಚಮಚ
*ಚಕ್ಕೆ -೬
*ಲವಂಗ- ೬
*ಏಲಕ್ಕಿ – ೬
*ಈರುಳ್ಳಿ – ೨
*ಟೊಮೆಟೊ – ೨
*ಗೋಡಂಬಿ – ೧೦
*ಗಸಗಸೆ – ೧ ಚಮಚ
*ಅರಿಶಿಣ – ೧ ಚಮಚ
*ಹಾಲು – ೧/೨ ಕಪ್
*ಉಪ್ಪು – ಒಂದೂವರೆ ಚಮಚ
*ನೀರು –

ಮಾಡುವ ವಿಧಾನ :

ಕುಕ್ಕರ್‌ಗೆ ನೀರು ಹಾಕಿ, ಕಾಬೂಲ್ ಕಡಲೇಕಾಳು ಹಾಕಿ ಬೇಯಲು ಬಿಡಿ. ಚಕ್ಕೆ, ಲವಂಗ, ಏಲಕ್ಕಿ, ಈರುಳ್ಳಿ, ಟೊಮೆಟೊ, ಒಣ ಕೊಬ್ಬರಿ ತುರಿ, ಗೋಡಂಬಿ, ಗಸಗಸೆ ಮಿಶ್ರಣಕ್ಕೆ ಅಗತ್ಯವಿರುವಷ್ಟು ನೀರು ಹಾಕಿ ರುಬ್ಬಿಕೊಳ್ಳಿ, ಪ್ಯಾನ್‌ಗೆ ಎಣ್ಣೆ ಹಾಕಿ, ಕಾದ ಮೇಲೆ ಶುಂಠಿ ಬೆಳುಳ್ಳಿ ಪೇಸ್ಟ್, ಕಸೂರಿ ಮೇಥಿ, ಈರುಳ್ಳಿ , ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಟೊಮೆಟೊ, ಅಚ್ಚಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಅರಿಶಿಣ ಪುಡಿ, ಟೊಮೆಟೊ ಸಾಸ್, ಹಾಲು, ರುಬ್ಬಿಕೊಂಡ ಮಸಾಲ ಹಾಕಿ ಮಿಕ್ಸ್ ಮಾಡಿ. ನಂತರ ಬೇಯಿಸಿದ ಕಾಬೂಲ್ ಕಡಲೆ, ಉಪ್ಪು, ನೀರು ಹಾಕಿ ಸ್ವಲ್ಪ ಹೊತ್ತು ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ಚನಾ ಮಸಾಲ ರೆಡಿ.