ಚದುರಂಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಸೆ.12: ಜಿಲ್ಲಾ ಪಂಚಾಯತ, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ 2023-24ನೇ ಸಾಲಿನ ಪ್ರಾಥಮಿಕÀ ಮತ್ತು ಪ್ರೌಢಶಾಲೆಗಳ ಬಾಲಕ/ಬಾಲಕಿಯರ ಜಿಲ್ಲಾಮಟ್ಟದ ಕ್ರೀಡಾಕೂಟಗಳು ಜರುಗಿದವು. ಪ್ರಾಥಮಿಕ ಬಾಲಕಿಯರ ಚದುರಂಗ ಸ್ಪರ್ಧೆಯಲ್ಲಿ ಶಾಂತಿನಿಕೇತನ ಪ್ರಾಥಮಿಕÀ ಶಾಲೆಯ ಮಕ್ಕಳಾದ ಸ್ನೇಹಾ ಪಾಟೀಲ, ಅಕ್ಷರಾ ಬೊಂರ್ದಡೆ, ಅನುಕಿ ಸಿಂಧೆ, ಸಂಸ್ಕøತಿ ತೋಸ್ನಿವಾಲ, ಶೃದ್ಧಾ ತುಪ್ಪದ, ಪ್ರಥಮ ಸ್ಥಾನವನ್ನು ಪಡೆದಿದ್ದಾರೆ, ಬಾಲಕರ ವಿಭಾಗದಲ್ಲಿ ರೋಹಿತ ಕುಂಬಾರ, ಮಹಮ್ಮದ ಅಜರ ಅತ್ತಾರ, ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಬಾಲಕಿಯರ ಪ್ರಾಢಶಾಲಾ ವಿಭಾಗದ ಚದುರಂಗ ಸ್ಪರ್ಧೆಯಲ್ಲಿ ಶ್ರೇಯಾ ಶಿವಶರಣ, ಸಂಜನಾ ಪಾಟೀಲ, ತನುಶ್ರೀ ಹಿರೇಮಠ, ಭಕ್ತಿ ತೋಸ್ನಿವಾಲ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಇವರಿಗೆ ಸಂಸ್ಥೆಯ ಚೇರಮನ್‍ರಾದ ಡಾ. ಸುರೇಶ ಬಿರಾದಾರ ಅದ್ಯಕ್ಷೆಯಾದ ಶ್ರೀಮತಿ ಶೀಲಾ ಬಿರಾದಾರ, ನಿರ್ದೇಶಕರಾದ ಶರತ್ ಬಿರಾದಾರ ಹಾಗೂ ಪ್ರಾಚಾರ್ಯರಾದ ಶ್ರೀ ಶ್ರೀಧರ ಕುರಬೆಟ ಮತ್ತು ದೈಹಿಕ ಶಿಕ್ಷಕರಾದ ಎ. ಹೆಚ್. ಸಗರ, ಕಿರಣ ರಾಠೋಡ ಶಿಕ್ಷಕರಾದ ಪ್ರವೀಣ ಗೆಣ್ಣುರ, ಶ್ವೇತಾ ಪಾಟೀಲ, ಅಶ್ವಿನ ವಗದರಗಿ, ಸುರೇಖಾ ಪಾಟೀಲ, ತಬಸುಮ ಅಭಿನಂದನೆಯನ್ನು ಸಲ್ಲಿಸಿದ್ದಾರೆ.