ಚದುರಂಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಭಿನವ

ಶಹಾಪೂರ:ಸೆ.7:ಯಾದಗಿರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಕ್ರೀಡೆಯಲ್ಲಿ ಶಹಾಪುರ ತಾಲ್ಲೂಕಿನ ಆದರ್ಶ ವಿದ್ಯಾಲಯದ ಪ್ರಾಥಮಿಕ ವಿಭಾಗದಲ್ಲಿ. ಕುಮಾರ್ ಅಭಿನವ ದೇವಿಂದ್ರಪ್ಪ ಆಲ್ದಾಳ ಜಿಲ್ಲಾ ಮಟ್ಟದ ಚೆಸ್ (ಚದುರಂಗ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಚೆಸ್ ಕ್ರೀಡೆಗೆ ಆಯ್ಕೆಯಾಗಿದ್ದಾನೆ ಎಂದು ದೈಹಿಕ ಶಿಕ್ಷಕರಾದ ಶ್ರೀ ವೀರಭದ್ರ ಬಡಿಗೇರ ಪತ್ರಿಕೆಗೆ ತಿಳಿಸಿದರು.
.ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಮುಖ್ಯಗುರುಗಳಾದ ಶ್ರೀ ಹೆಚ್.ಎಸ್.ಸೋಮಾಪುರ.ಎಸ್.ಡಿ.ಎಮ್.ಸಿ.ಅದ್ಯಕ್ಷರು.ಸದಸ್ಯರು.ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ದೈಹಿಕ ಶಿಕ್ಷಕರಾದ ಶರಣಬಸವ ದೇಸಾಯಿ.ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.