ಚತುಷ್ಪಥ ರಸ್ತೆಯನ್ನಾಗಿಸಲು ಕೆಆರ್‌ಎಸ್‌ ಮನವಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಜ.14: ನಗರದ ಸುಧಾಕ್ರಾಸ್ ನಿಂದ ಹೊಸಪೇಟೆಯ ಬೈಪಾಸ್ ವರೆಗಿನ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಕರ್ನಾಟಕ ರಾಷ್ಟ್ರ  ಸಮಿತಿ (ಕೆ.ಆರ್.ಎಸ್) ಪಕ್ಷ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದೆ.
ಪಕ್ಷದ ಅಧ್ಯಕ್ಷ ಅಲ್ಲಿಪುರದ ವಾಸರೆಡ್ಡಿ ಈ ಕುರಿತು ಮನವಿ ಸಲ್ಲಿಸಿ.  ನಗರಪಾಲಿಕೆಯ 33ನೇ ವಾರ್ಡ್ ವ್ಯಾಪ್ತಿಯಲ್ಲಿನ ಅಲ್ಲಿಪುರದ ಬಳಿ ಇಂಜಿನಿಯರಿಂಗ್ ಕಾಲೇಜ್
ಮತ್ತು  ಎಂಬಿಎ ಕಾಲೇಜ್,  ಬೆಸ್ಟ್ ಕಾಲೇಜ್, ಶಾಲೆಗಳು ಇವೆ. ಈ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಸಿಬ್ಬಂದಿಗಳು ಓಡಾಡುತ್ತಿದ್ದು, ಹಾಗೂ ಜಿಂದಾಲ್ ಇತರೆ ಕಾರ್ಖಾನೆಗಳಿಗೆ ಓಡಾಡುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ತಿರುಗಾಡುತ್ತಿವೆ. ಆದುದರಿಂದ ಈ ರಸ್ತೆ ವಾಹನಗಳ ದಟ್ಟಣೆಯಿಂದ ಕೂಡಿದ್ದು ಸುಗಮ ಸಂಚಾರಕ್ಕಾಗಿ  ಚತುಷ್ಪಥ ರಸ್ತೆಯನ್ನಾಗಿ ಮಾಡುಬೇಕೆಂದಿದ್ದಾರೆ. 
ಹೊಸಪೇಟೆ- ಬಳ್ಳಾರಿ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಇದನ್ನು ಅಗಲೀಕರಣ ಮಾಡಿ ಚತುಷ್ಪಥ ರಸ್ತೆಯನ್ನಾಗಿ ಮಾಡುವುದು ತುಂಬಾ ಅವಶ್ಯಕತೆ ಇದೆ.
ಈಗ ಇರುವ ರಸ್ತೆಯು ಚಿಕ್ಕದಾಗಿರುವ ಕಾರಣ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಆದುದರಿಂದ ಅಗಲೀಕರಣ ಮಾಡಬೇಕು.‌
ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೊಸಪೇಟೆ ಬೈಪಾಸ್ ನಿಂದ
ಬಳ್ಳಾರಿ ನಗರದ ವರೆಗೆ ಡಬಲ್ ರಸ್ತೆ ಮಾಡಲು ನಕ್ಷೆ ಇತರೆ ದಾಖಲೆಗಳನ್ನು ತಮ್ಮ ಮೇಲಾಧಿಕಾರಿಗಳಾದ ಬೆಂಗಳೂರು ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದ ಬಗ್ಗೆ ಮಾಹಿತಿ ಇದೆ. ಆದರೆ ಅದನ್ನು ಅನುಷ್ಟಾನಕ್ಕೆ ತಂದಿಲ್ಲದ ಬಗ್ಗೆ ತಿಳಿಯುತ್ತಿಲ್ಲ.  ಜಿಲ್ಲಾಡಳಿತದ ವತಿಯಿಂದ ಅಥವಾ ಮಹಾನಗರ ಪಾಲಿಕೆಯಿಂದ, ಇಲ್ಲವೇ ಲೋಕೋಪಯೋಗಿ ಇಲಾಖೆಯಿಂದ ಅಗಲೀಕರಣ ಮಾಡಿ, ಚತುಷ್ಪಥ ರಸ್ತೆ ನಿರ್ಮಾಣ ಮಾಡಲು  ಶ್ರೀನಿವಾಸ್‌ರೆಡ್ಡಿ ಮನವಿ ಪತ್ರದಲ್ಲಿ ಕೋರಿದ್ದಾರೆ.

a