ಚಡ್ಡಿದೋಸ್ತ್ ಗೆ ಗೆಲುವಿನ ಸಂಭ್ರಮ

ಸೆವೆನ್ ರಾಜ್ ನಿರ್ಮಾಣದಲ್ಲಿ ಮೂಡಿಬಂದ “ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರ ಎಲ್ಲಾ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು ಚಿತ್ರತಂಡ ಮುಖದಲ್ಲಿ ಮತ್ತಷ್ಟು ಮಂದಹಾಸ ಮೂಡಿದೆ.

ಗೆಲುವಿನ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ಚಿತ್ರ ನೋಡುವ ಪ್ರೇಕ್ಷಕರಿಗೆ ಚಿನ್ನದ ನಾಣ್ಯ ನೀಡಲು ನಿರ್ಮಾಪಕ ಸೆವೆನ್ ರಾಜ್ ಉದ್ದೇಶಿಸಿದ್ದಾರೆ. ರಾಜ್ಯಾದ್ಯಂತ ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು ಬೆಂಗಳೂರಿನ ವೀರೇಶ್ ಚಿತ್ರಮಂದಿರಲ್ಲಿ ಚಿತ್ರ ನೋಡುವ ಮಂದಿಗೆ ಚಿನ್ನದ ನಾಣ್ಯವನ್ನು ಪಡೆಯುವ ಅದೃಷ್ಠವನ್ನು ತಂಡ ಕಲ್ಪಿಸಿದೆ.

ಚಿತ್ರದ ಯಶಸ್ಸಿನ ಬಗ್ಗೆ ಹೇಳಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ನಿರ್ಮಾಪಕ ಸೆವೆನ್ ರಾಜ್ ಅವರು, ಕುಟುಂಬ ಸಮೇತ ನೋಡುವ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ನೀಡಿದ್ದುದು ಬೇಸರ ತರಿಸಿದೆ. ಸಿನಿಮಾ ನೋಡಿದ ಮಂದಿ ಎಲ್ಲರೂ ಖುಷಿಪಟ್ಟು ಸಂಭ್ರಮಿಸಿದ್ದಾರೆ.

‘ಎ’ ಪ್ರಮಾಣ ಪತ್ರ ನೀಡಿದ ಹಿನ್ನೆಲೆಯಲ್ಲಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರಲ್ಲಿ ಚಿಕ್ಕಮಕ್ಕಳಿಗೆ ಪ್ರವೇಶ ನೀಡಲಿಲ್ಲ ಇದು ಬೇಸರವಾಗಿದೆ.ಅದನ್ನು ಬಿಟ್ಟರೆ ಚಿತ್ರ ಎಲ್ಲಾ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ, ಜೊತೆಗೆ ಮತ್ತಷ್ಟು ಪ್ರೇಕ್ಷಕರನ್ನು ಹುರಿದುಂಬಿಸಲು ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಒದಗಿಸಲಾಗಿದೆ, ಚಿತ್ರ ಇಪ್ಪತ್ತೈದು ದಿನಗಳ ಕಾಲ ಪ್ರದರ್ಶನ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಕಾಮಿಡಿ ಜೊತೆಗೆ ಕ್ರೈಮ್ ಥಿಲ್ಲರ್ ಹೊಂದಿರುವ ಕಥಾನಕದಲ್ಲಿ ಸ್ನೇಹ ಪ್ರೀತಿ, ಸಂಬಂಧ ರಾಜಕೀಯ, ಪೋಲೀಸ್ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳು ಚಿತ್ರದಲ್ಲಿವೆ. ಹೀಗಾಗಿ ಜನರಿಗೆ ಚಿತ್ರ ಇಷ್ಟವಾಗಿದೆ ಎನ್ನುತ್ತಾರೆ ಅವರು.

ನಿರ್ದೇಶಕ ಕಮ್ ನಟ, ಆಸ್ಕರ್ ಕೃಷ್ಣ,ಚಿತ್ರದಲ್ಲಿ ಹಾಸ್ಯದ ಜೊತೆಗೆ ಪ್ರೀತಿಯ ಕಥಾನಕ ಇದೆ, ಎಲ್ಲೆಡೆ ಉತ್ತಮ ಪ್ರತ್ರಿಕ್ರಿಯೆ ಇದೆ.ಮತ್ತೊಬ್ಬ ನಟ ಲೋಕೇಂದ್ರ ಸೂರ್ಯ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಚಿತ್ರಮಂದಿರಕ್ಕೆ ಬರಲು ಹೆದರುವ ಸಮಯದಲ್ಲಿ ನಾವು ಚಿತ್ರಮಂದಿರಕ್ಕೆ ಬಂದಿದ್ದೇವೆ. ಸರ್ಕಾರ ಪ್ರೇಕ್ಷಕರ ಸಾಮಥ್ರ್ಯವನ್ನು ನೂರಕ್ಕೆ ಹೆಚ್ಚಿಸಿದರೆ ಇನ್ನೂ ಒಳ್ಳೆಯದಾಗಲಿದೆ ಎಂದರು.

ಮತ್ತೊಬ್ಬ ನಟ ಲೋಕೇಂದ್ರ ಸೂರ್ಯ,ವಿವಿಧ ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರೆ ನಟಿ ಗೌರಿ ನಾಯರ್,ನನ್ನ ಪಾತ್ರವನ್ನು ಜನ ಇಷ್ಟಪಟ್ಟಿದ್ದಾರೆ ಇದು ಖುಷಿಯ ಸಂಗತಿ ಎಂದು ಮಾಹಿತಿ ಹಂಚಿಕೊಂಡರು.

ಕೈ ಹಿಡಿದ ಪ್ರೇಕ್ಷಕ

ಕೊರೊನಾ ಸೋಂಕಿನ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ರಷ್ಟು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಅಂತಹುದರ ನಡುವೆ ಚಿತ್ರವನ್ನು ಪ್ರೇಕ್ಷಕ ಕೈಹಿಡಿದಿದ್ದು ಚಿತ್ರತಂಡದ‌ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.