ಚಡಚಣ ಪಟ್ಟಣ ಪಂಚಾಯ್ತಿ ಬಿಜೆಪಿ ಮಡಿಲಿಗೆ:ಅಧ್ಯಕ್ಷೆಯಾಗಿ ಬಾಳವ್ವ,ಉಪಾದ್ಯಕ್ಷರಾಗಿ ಶರಣಾಬಾಯಿ ಅವಿರೋಧ ಆಯ್ಕೆ

ಚಡಚಣ:ನ.7:ಸ್ಥಳಿಯ ಪಟ್ಟಣ ಪಂಚಾಯ್ತಿಗೆ ಎರಡನೇ ಅವಧಿಗೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಬಿಜೆಪಿಯ ಬಾಳವ್ವ ಅಗಸರ ಹಾಗೂ ಉಪಾಧ್ಯಕ್ಷರಾಗಿ ಶರಣಾಬಾಯಿ ಖಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಪಟ್ಟಣ ಪಂಚಾಯ್ತಿಗೆ 15 ಸದಸ್ಯರ ಸಂಖ್ಯಾಬಲ ಇದ್ದು,ಇದರಲ್ಲಿ 10 ಜನ ಬಿಜೆಪಿ ಪಕ್ಷದ ಸದಸ್ಯರಿದ್ದಾರೆ.3 ಜನ ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಇದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯ ವರೆಗೆ ನಾಮಪತ್ರ ಸಲ್ಲಿಸಲು ಸಮಯ ನಿಗದಿ ಪಡಿಸಲಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಬಾಳವ್ವ ಅಗಸರ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶರಣಾಬಾಯಿ ಖಟ್ಟಿ ಮಾತ್ರ ನಾಮಪತ್ರ ಸಲ್ಲಿಸಿದರು.ಹೀಗಾಗಿ ಬಿಜೆಪಿ ಸದಸ್ಯರು ಸರಳ ಬಹುಮತದಿಂದ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿಯೂ ಆದ ತಹಶಿಲ್ದಾರ ಸುರೇಶ ಚವಲರ ಅಧಿಕೃತ ಅಯ್ಕೆಯನ್ನು ಘೋಷಣೆ ಮಾಡಿದರು.
ನಂತರ ನಡೆದ ವಿಜಯೋತ್ಸವದಲ್ಲಿ ,ಮಾತನಾಡಿದ ಬಿಜೆಪಿ ಜಿಲ್ಲ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ,ಅಧ್ಯಕ್ಷರಾಗಿ ಆಯ್ಕೆಯಾದ ಬಾಳವ್ವ ಅಗಸರ ರಾಜ್ಯದಲ್ಲಿಯೇ ಅತಿ ಹೆಚ್ಚು ವಯೋಮಾನದ(96) ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅವರ ಆಯ್ಕೆಗೆ ಬೆಂಬಲಿಸಿದ ಸದಸ್ಯರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಭಿಮಾಶಂಕರ ಬಿರಾದಾರ, ಬಿಜೆಪಿ ಜಿಲ್ಲ ಘಟಕದ ಉಪಾಧ್ಯಕ್ಷ ಸುರೇಶಗೌಡ ಬಿರಾದಾರ ಮತನಾಡಿ,ಪಕ್ಷದ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಡಿಸಿಎಂ ಗೋವಿಂದ ಕಾರಜೋಳ,ಮುಖಂಡ ಡಾ.ಗೋಪಾಲ ಕರಜೋಳ ಅವರ ನೇತ್ರತ್ವ ಹಾಗೂ ಕಾರ್ಯಕರ್ತರ ಪರಿಶ್ರಮ ಅಡಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಾಗಠಾಣ ಮಂಡಳ ಅಧ್ಯಕ್ಷ ರಾಮ ಅವಟಿ,ಮಾಜಿ ಅಧ್ಯಕ್ಷ ಕಲ್ಲು ಉಟಗಿ,ಮುಖಂಡರಾದ ಅಪ್ಪುಗೌಡ ಬಿರಾದಾರ,ಶ್ರೀಮಂತ ಉಮರಾಣಿ,ಪೀರಪ್ಪ ಅಗಸರ,ಶ್ರೀಕಾಂತ ಗಂಟಗಲ್ಲಿ,ಮಲ್ಲೇಶಪ್ಪ ಡೊಳ್ಳಿ,ರಾಜೂ ಕ್ಷತ್ರಿ,ಜಕರಾಯ ಅಂಜುಟಗಿ,ಅಪ್ಪುಗೌಡ ಪಟೀಲ,ಶ್ರೀಶೈಲ ಗೊಬ್ಬಿ,ಶಿವಾನಂದ ಖಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.