ಚಡಚಣ ಪಟ್ಟಣದಲ್ಲಿ ಜನಸ್ಪಂದನ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಎಡಿಜಿಪಿ ಅಲೋಕ ಕುಮಾರ

ಚಡಚಣ : ಜು.21:ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಮಂಗಳವಾರ ಸಾಯಂಕಾಲ ಸಾರ್ವಜನಿಕರಿಂದ ಬಂದ ದೂರುಗಳನ್ನ ಸ್ವೀಕರಿಸಿದರು. ಬಹಳಷ್ಟು ಜನರು ಅನೇಕ ಅಹವಾಲುಗಳನ್ನ ಹಿರಿಯ ಪೆÇಲೀಸ್ ಅಧಿಕಾರಿಗಳ ಮುಂದಿಟ್ಟರು. ಈ ವೇಳೆ ಸಭೆಗೆ ಆಗಮಿಸಿದ್ದ ಬಹುತೇಕ ಸಾರ್ವಜನಿಕರು ಚಡಚಣ ಪೆÇಲೀಸರ ವಿರುದ್ಧವೇ ಆರೋಪಗಳ ಪಟ್ಟಿಯನ್ನೇ ಮುಂದಿಟ್ಟರು .
ಚಡಚಣ ಠಾಣೆ ಪೆÇಲೀಸರ ಮಾನ-ಮರ್ಯಾದೆ ಹರಾಜು: ಎಡಿಜಿಪಿ ಅಲೋಕ್ ಕುಮಾರ್ ಎದುರೆ ಚಡಚಣ ಪೆÇಲೀಸರ ಮಾನ ಮರ್ಯಾದೆ ಹರಾಜಾಗಿದೆ.ಚಡಚಣ ಪೆÇಲೀಸರ ವಿರುದ್ಧವೇ ಅನೇಕ ದೂರುಗಳನ್ನ ಎಡಿಜಿಪಿ ಅಲೋಕ್ ಕುಮಾರ್ ರಿಗೆ ನೀಡಿದರು.
ಚಡಚಣ ಸಿಪಿಐ, ಪಿಎಸೈ ಮೇಲೆ ಗರಂ ಆದ ಎಡಿಜಿಪಿ: ಅಲೋಕ್ ಕುಮಾರ್ ಅಂದ್ರೆ ಪೆÇಲೀಸ್ ಇಲಾಖೆಯ ಫೈರ್ ಬ್ರಾಂಡ್. ಅವರ ಮುಂದೆ ಚಡಚಣ ಠಾಣೆಯ ಪಿಎಸೈ ಸಿಪಿಐ ಬಗ್ಗೆ ನೂರೆಂಟು ದೂರುಗಳ ಕೇಳಿ ಬಂದಿದ್ದರಿಂದ ಅಲೋಕ್ ಕುಮಾರ್ ಇಬ್ಬರು ಅಧಿಕಾರಿಗಳ ಮೇಲೆ ಗರಂ ಆದರು. ವೇದಿಕೆ ಮೇಲೆ ಕುಂತಲ್ಲೆ ಇಬ್ಬರ ಕಡೆಗು ಕಣ್ಣು ಕೆಂಪಗಾಗಿಸಿಕೊಂಡು ನೋಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಪಟ್ಟಣದಲ್ಲಿ ಚಡಚಣ ಪಟ್ಟಣದಲ್ಲಿ ಎಗ್ಗಿಲ್ಲದೆ ಮಾವಾ, ಗುಟಕಾ ದಂಧೆಯ ಬಗ್ಗೆ ಹಲವಾರು ಆರೋಪಗಳು ಚಡಚಣ ಸಿಪಿಐ ಹಾಗೂ ಪಿಎಸೈ ಮೇಲೆ ಕೇಳಿ ಬಂದವು. ಈ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಎಡಿಜಿಪಿ ಅವರ ಎದುರು ಮಾತನಾಡಿದ ಸಾರ್ವಜನಿಕರು ಹಾಗೂ ವಕೀಲರೊಬ್ಬರು, ಗುಟುಕಾ ತಯಾಕರು, ಮಾವಾ ದಂಧೆಕೋರರಿಂದ ಚಡಚಣ ಪೆÇಲೀಸರು ಹಪ್ತಾ ಪಡೆಯುವ ಬಗ್ಗೆ ಗಂಭೀರ ಆರೋಪ ಮಾಡಿದ್ರು. ಪೆÇಲೀಸರ ಜೇಬಲ್ಲೆ ಬೇಕಾದ್ರೆ ಮಾವಾ ಸಿಗ್ತವೇ ಚೆಕ್ ಎನ್ನುವ ಮೂಲಕ ಸ್ವತಃ ಹಿರಿಯ ಪೆÇಲೀಸ್ ಅಧಿಕಾರಿಗಳನ್ನೆ ಮುಜುಗರಕ್ಕೊಳಗಾಗುವ ಹಾಗೇ ಮಾಡಿದರು.
ಬೈರಗೊಂಡ -ಚಡಚಣ ಕುಟುಂಬಸ್ಥರ ಜೊತೆ ಸಂಧಾನ ಸಭೆ:
ಸಾರ್ವಜನಿಕ ಸಭೆ ಬಳಿಕ ಎಡಿಜಿಪಿ ಅಲೋಕ್ ಕುಮಾರ್ ಮಹತ್ವದ ಸಭೆಯೊಂದನ್ನ ನಡೆಸಿದರು. ಈ ಸಭೆಗೆ ಮಹದೇವ್ ಬೈರಗೊಂಡ ಕುಟುಂಬ ಹಾಗೂ ಚಡಚಣ ಕುಟುಂಬಸ್ಥರನ್ನ ಕರೆದು ಸಂಧಾನ ಮಾಡಿಸುವ ಪ್ರಯತ್ನ ನಡೆಸಿದ್ರು. ಕಳೆದ 5 ದಶಕಗಳಿಂದ ಎರಡು ಕುಟುಂಬಗಳ ದ್ವೇಷದಿಂದ ಅನೇಕ ಜನರ ಹೆಣಗಳು ಬಿದ್ದಿದ್ದು. ಇದಕ್ಕೆ ತಿಲಾಂಜಲಿ ಹಾಡಲು ಎಡಿಜಿಪಿ ಪ್ರಯತ್ನಿಸಿದ್ರು. ಎರಡು ಕುಟುಂಬಗಳು ಶಾಂತಿ ಕಾಪಾಡಬೇಕು. ಹಳೆಯದನ್ನ ಮರೆತು ಒಂದಾಗಬೇಕು ಎಂದರು.
ಮಾಸ್ಟರ್ ಮೈಂಡ್ ಮಲ್ಲಿಕಾರ್ಜುನ ಚಡಚಣ, ವಿಮಲಾಬಾಯಿ ಸರೆಂಡರ್ ಆಗಲಿ: ಭೀಮಾತೀರದ ಮಾಸ್ಟರ್ ಮೈಂಡ್ ಮಲ್ಲಿಕಾರ್ಜುನ, ಹಾಗೂ ಆತನ ಪತ್ನಿ ವಿಮಲಾಬಾಯಿ ಪರಾರಿಯಾಗಿದ್ದು, ಇಬ್ಬರು ಇಲಾಖೆಗೆ ಶರಣಾಗಬೇಕು ಎಂದು ವಾರ್ನ್ ಮಾಡಿದ್ದರು. 2018ರಲ್ಲಿ ಭೀಮಾತೀರದ ಉಮರಾಣಿಯಲ್ಲಿ ಶಾಂತಿ ಸಭೆ ನಡೆಸಿ ವಿಮಲಾಬಾಯಿಗೆ ಗಂಡನನ್ನ ಸರೆಂಡರ್ ಮಾಡಿಸುವಂತೆ ತಿಳಿ ಹೇಳಿದ್ದೆ. ಹಾಗೇ ಅವರು ನೀಡಿದ ಮನವಿಯಂತೆ ಹಂತಕ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಹತ್ಯೆಯಲ್ಲಿ ಮಹಾದೇವ ಬೈರಗೊಂಡನನ್ನ ಬಂಧಿಸಿ ಆಕೆಗೆ ನ್ಯಾಯ ನೀಡಿದ್ವಿ. ಆದ್ರೆ ಚಡಚಣ ಕುಟುಂಬದವರು ಮತ್ತೆ ಮಹಾದೇವ ಬೈರಗೊಂಡ ಮೇಲೆ ಪೈರಿಂಗ್ ನಡೆಸಿದ್ದಾರೆ ಎಂದು ಎಡಿಜಿಪಿ ತಮ್ಮ ಅಸಮಧಾನ ಹೊರಹಾಕಿದ್ರು.
ಇನ್ಮುಂದೆ ಉಲ್ಟಾ ಹೊಡೆದ್ರೆ ನಡೆಯೊಲ್ಲ: ಅಂದು ಗಂಡನನ್ನ ಸರೆಂಡರ್ ಮಾಡಿಸುವೆ ಎಂದು ವಿಮಲಾಬಾಯಿ ಹೇಳಿ ಉಲ್ಟಾ ಹೊಡೆದಿದ್ದಳು. ಈಗ ಮತ್ತೆ ಹಾಗೇ ಮಾಡಿದ್ರೆ ನಡೆಯೋಲ್ಲ. ಚಡಚಣ ಸಂಬಂಧಿಕರು ಆಕೆ ಹಾಗೂ ಆಕೆ ಗಂಡ ಮಲ್ಲಿಕಾಜೀಯನ್ನ ಸರೆಂಡರ್ ಮಾಡಿಸಲೇಬೇಕು. ಆಗೊಲ್ಲ, ಗೊತ್ತಿಲ್ಲ ಅಂತಾ ಹೇಳಿದರೆ ಸುಮ್ಮನಿರಲ್ಲ ಎಂದು ಚಡಚಣ ಸಂಬಂಧಿಕರಿಗೆ ಎಡಿಜಿಪಿ ವಾನಿರ್ಂಗ್ ಮಾಡಿದ್ರು. ಇತ್ತ ಮಹಾದೇವ ಬೈರಗೊಂಡ ಹಾಗೂ ಕುಟುಂಬಸ್ಥರಿಗೆ ಚಡಚಣ ಕುಟುಂಬದ ಉಸಾಬರಿಗೆ ಹೋಗಬಾರದು. ರಾತ್ರಿ ಮನೆಗಳಿಂದ ಹೊರಗೆ ಬರಬಾರದು ಅಂತಾ ತಾಕೀತು ಮಾಡಿದ್ರು.
ಈ ಸಂದರ್ಭದಲ್ಲಿ ಎಸ್ಪಿ ಎಚ್. ಡಿ. ಆನಂದಕುಮಾರ, ಹೆಚ್ಚುವರಿ ವರಿಷ್ಟಾಧಿಕಾರಿ ರಾಮ ಅರಸಿದ್ಧಿ, ಇಂಡಿ ಡಿಎಸ್ ಪಿ ಚಂದ್ರಕಾಂತ್ ನಂದರೆಡ್ಡಿ, ಚಡಚಣ ಸಿಪಿಐ ಸಾಹೇಬಗೌಡ ಪಾಟೀಲ, ಪಿಎಸ್‍ಐ ಸಂಜೀವ ತಿಪ್ಪಾರೆಡ್ಡಿ, ಝಳಕಿ ಪಿಎಸ್‍ಐ ಸಿದ್ದಪ್ಪ ಯಡಹಳ್ಳಿ ಪೆÇಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.