ಚಡಚಣ ತಾಲೂಕಾ ಸ್ವೀಪ್ ಸಮಿತಿ ವತಿಯಿಂದಮದುವೆ ಮಂಟಪದಲ್ಲಿ ಮತದಾನ ಜಾಗೃತಿ

ವಿಜಯಪುರ:ಮೇ.1: ಚಡಚಣ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪಟ್ಟಣದ ಕಲ್ಯಾಣ ಮಂಟಪದಲ್ಲಿ ಜರುಗಿದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ,ನವ ವಧು-ವರರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ಮತದಾರರ ಜಾಗೃತಿ ಕರ ಪತ್ರಗಳನ್ನು ವಧು-ವರರಿಗೆ ನೀಡುವುದರೊಂದಿಗೆ ಮದುವೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮತದಾರರಿಗೆ ಇದೇ ಮೇ-10ರಂದು ಜರುಗುವ ಮತದಾನ ದಿನ ತಪ್ಪದೇ ತಮ್ ವ್ಯಾಪ್ತಿಯ ಮತಗಟ್ಟೆಗೆ ತೆರಳಿ, ಮತದಾನ ಮಾಡುವಂತೆ ಸ್ವೀಪ್ ಸಮಿತಿ ಸದಸ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳನ್ನು ಶೃಂಗರಿಸಿ, ಮತದಾರರ ಹಿತದೃಷ್ಟಿಯಿಂದ ಮತದಾನ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಿರುವ ಅಗತ್ಯ ಮೂಲಭೂತ ಸೌಕರ್ಯ ಹಾಗೂ ಸೌಲಭ್ಯಗಳ ಸಾರ್ವಜನಿಕರಿಗೆ ಕುರಿತು ಮನವರಿಕೆ ಮಾಡಿಕೊಡಲಾಯಿತು.
ಮತದಾರರ ಮಾಹಿತಿಗಾಗಿ ಕರಪತ್ರದಲ್ಲಿರುವ ಮತದಾರರ ಪಟ್ಟಿಯಲ್ಲಿ ಹೆಸರು, ವಿ.ಎಚ್.ಎ ಆಪ್, ಮತದಾರರ ಚೀಟಿ ಇಲ್ಲದೇ ಇರುವ ಸಂದರ್ಭ ಮತದಾನ ಮಾಡಲು ತೆಗೆದುಕೊಂಡ ಹೋಗಬೇಕಾದ ದಾಖಲೆಗಳು, ಸಹಾಯವಾಣಿ, ದೂರು ನಿರ್ವಹಣಾ ಸಂಖ್ಯೆ, ಸಿ-ವಿಜಿಲ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯವರ ಸಂದೇಶ ನೀಡುವ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಯೋಜನಾಧಿಕಾರಿಗಳಾದ ಶಿವದತ್ತ ಕೊಟ್ಟಲಗಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.