ಚಡಚಣದಲ್ಲಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

ಚಡಚಣ:ಸೆ.25: ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಲಾಕ್ಡೌನ್ ಸಮಯದಲ್ಲಿ ತಮ್ಮ ಜೀವಪಣಕ್ಕಿಟ್ಟು ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ ಅವರಿಗೆ ಸಂರಕ್ಷಣೆ ಮತ್ತು ಮರಣ ಪರಿಹಾರ ಕನಿಷ್ಠ ವೇತನ ಮತ್ತು ಪಿಂಚಣಿ ನೀಡಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷರು ಅಶ್ವಿನಿ ತಳವಾರ್ ಮಾತನಾಡಿದರು
ಈ ಮುಖಾಂತರ ಚಡಚಣ ದಂಡಾಧಿಕಾರಿಗಳಾದ ಸುರೇಶ್ ಚವಲರ ಇವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ಹೇಳಿದರು
ಇದೇ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷರಾದ ಅಶ್ವಿನಿ ತಳವಾರ ಉಪಾಧ್ಯಕ್ಷರಾದ ಶೋಭಾ ಕಬಾಡಿ
ಸದಸ್ಯರಾದ ಶಿವಲೀಲಾ ಕಲ್ಯಾಣಶೆಟ್ಟಿ ಗಂಗೂಬಾಯಿ ಮಸಳೆ ಮತ್ತು ಶಶಿಕಲ ಕಟ್ಟಿಮನಿ
ನೀಲಮ್ಮ ಮೇಂಡಗುದ್ಲಿ ,ಸಾವಿತ್ರಿ ಭೈರಗೊಂಡ ,ಪ್ರೇಮ ಹಿವಣ್ಣಿ,ಭೌರಮ್ಮ ಪೂಜಾರಿ ,ಸಂಗೀತಾ ಸಿಂಗೆ ,ಮಾನಂದ ಪಾವಟೆ,
ಶ್ರೀದೇವಿ ಹೊಸಮನಿ ಇತರೆ ಕಾರ್ಯಕರ್ತರು ಉಪಸ್ಥಿತಿ ಇದ್ದರು