ಚಟುವಟಿಕೆ ಆಧಾರಿತ ಬೋಧನೆಗೆ ಆದ್ಯತೆ ನೀಡಿ: ಡಿಡಿಪಿಐ ಸಕ್ರೆಪ್ಪಗೌಡ

ಕಲಬುರಗಿ, ಜ.10:ಶಾಲೆಗಳಲ್ಲಿ ಮಕ್ಕಳಿಗೆ ಚಟುವಟಿಕೆ ಆಧಾರಿಕ ಬೋಧನೆ ಮಾಡುವ ಮೂಲಕ ಶಿಕ್ಷಣದ ಬುನಾದಿ ಗಟ್ಟಿಗೊಳಿಸಬೇಕೆಂದು ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಅವರುಸೂಚಿಸಿದ್ದಾರೆ.
ಕಲ್ಬುರ್ಗಿ ಉತ್ತರ ವಲಯ ತಾಲೂಕು ಮಟ್ಟದ ಶಿಕ್ಷಕರ ನಲಿ ಕಲಿ ಕಲಿಕಾ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮೇಳದಲ್ಲಿ ಕನ್ನಡ ಹಾಗೂ ಉರ್ದು ಮಾಧ್ಯಮದ ಸರ್ಕಾರಿ ಶಾಲೆಯ 50 ಜನ ಶಿಕ್ಷಕರು ತಯಾರಿಸಿದ ಆಟೋಪಕರಣಗಳನ್ನು ಹಾಗೂ 120ಕ್ಕೂ ಹೆಚ್ಚು ಪಾಠೋಪಕರಣಗಳು ನಲಿ ಕಲಿ ಮೇಳದಲ್ಲಿ ಪ್ರದರ್ಶನಗೊಂಡವು.ಮೇಳ ವೀಕ್ಷಣೆ ಮಾಡಲು ಎರಡು ನೂರಕ್ಕೂ ಹೆಚ್ಚು ಜನ ಶಿಕ್ಷಕರು ಆಗಮಿಸಿದ್ದು ಗಮನ ಸೆಳೆಯಿತು.
ಕಲ್ಬುರ್ಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಹಂಚ್ನಾಳ್ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಶಾಂತಬಾಯಿ ಬಿರಾದಾರ ಅವರು ನೇತೃತ್ವ ವಹಿಸಿದ್ದರು
ಮೇಳದಲ್ಲಿ ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು, ಮುಸ್ಲಿಂ ಸಂಘದ ಅಧ್ಯಕ್ಷರು, ತಾಲೂಕಿನ ಎಲ್ಲಾ ಶಿಕ್ಷಣ ಸಂಯೋಜಕರು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಸಮೂಹ ಸಂಪನ್ಮೂಲ ವ್ಯಕ್ತಿಗಳು ಮತ್ತು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಮಸ್ತ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು