ಚಟುವಟಿಕೆಗಳಲ್ಲಿ ತೊಡಗುವಿಕೆಯಿಂದ ಸಕಾರಾತ್ಮಕ ವಿಚಾರ


ಧಾರವಾಡ,ಆ.4: ಮನುಷ್ಯದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿಆರೋಗ್ಯವಾಗಿದ್ದರೆ ಮಾತ್ರ ನಿರೋಗಿಯಾಗಿರುತ್ತಾನೆಎಂದುಧಾರವಾಡ ಕ.ವಿ.ವಿ.ಯ.ವಿಶ್ರಾಂತ ಮನೋವಿಜ್ಞಾನ ಪ್ರಾಧ್ಯಾಪಕಡಾ.ಪಿ.ಎಸ್. ಹಲ್ಯಾಳ ಅವರುಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ. ವಿಶಾಲ ರಾಜಶೇಖರ ಹಂಚಿನಮನಿ ಸಂಸ್ಮರಣೆದತ್ತಿಕಾರ್ಯಕ್ರಮದಲ್ಲಿ ‘ಮನಸ್ಸಿನ ಆರೋಗ್ಯ ಮತ್ತುಅಸ್ವಸ್ಥತೆ’ ಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ರೋಗ ರುಜಿನಗಳಿಂದ ಮಾತ್ರ ಮನುಷ್ಯಅನಾರೋಗ್ಯ ಹೊಂದುವುದಿಲ್ಲ, ಮನುಷ್ಯನಿಗೆ ವೃತ್ತಿಯಲ್ಲಿತೃಪ್ತಿ, ಕೌಟುಂಬಿಕವಾಗಿ ನೆಮ್ಮದಿ, ಅನೋನ್ಯತೆ, ಇನ್ನೊಬ್ಬರನ್ನ ಸದಾ ಪ್ರೀತಿಸುವಗುಣಇದ್ದಾಗ ಮಾತ್ರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮನುಷ್ಯ ಸದಾ ಒಂದಿಲ್ಲೊಂದುಕಾರ್ಯದಲ್ಲಿತೊಡಗಿರುವತನಕಅನಾರೋಗ್ಯ ನಮ್ಮನ್ನುಕಾಡುವುದಿಲ್ಲ. ನಕಾರಾತ್ಮಕ ಯೋಚನೆಗಳು ನಮಗೆ ಬರುವುದಿಲ್ಲ. ಸದಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಸಕಾರಾತ್ಮಕ ವಿಚಾರಗಳು ಮೂಡುತ್ತವೆಎಂದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಜೆಎಸ್‍ಎಸ್ ಆಡಳಿತಾಧಿಕಾರಿ ಎಸ್.ಜಿ.ಬಿರಾದಾರ ಮಾತನಾಡಿ, ಭಾರತದೇಶದಲ್ಲಿ 30 ಕೋಟಿಜನ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.ಆರೋಗ್ಯ ಮತ್ತುಅಸ್ವಸ್ಥತೆಎರಡೂ ಪರಸ್ಪರ ವಿರೋಧಿಗಳು.ಮನುಷ್ಯನಲ್ಲಿಜೀವನೋತ್ಸಾಹ ಬಹಳ ಮುಖ್ಯ.ಯಾವ ಸಂದರ್ಭದಲ್ಲಿಯೂಜೀವನೋತ್ಸಾಹವನ್ನು ಕಳೆದುಕೊಳ್ಳಬಾರದು.ಇವತ್ತಿನಜನಾಂಗ ಮಾನಸಿಕ ಒತ್ತಡದಿಂದ ಬಳಲುತ್ತಿದೆ.ಮಾನಸಿಕ ಒತ್ತಡವನ್ನುಕಡಿಮೆ ಮಾಡಿಕೊಳ್ಳಬೇಕಾದರೆ ನಾವು ನಿತ್ಯ, ಯೋಗ, ನಡಿಗೆ, ಪ್ರಾಣಾಯಾಮದತ್ತ ನಮ್ಮಗಮನವನ್ನು ಹರಿಸಬೇಕಾಗಿದೆಎಂದರು.
ಇದೇ ಸಂದರ್ಭದಲ್ಲಿಹುಬ್ಬಳ್ಳಿಯ ಕೆ.ಎಚ್.ಪಾಟೀಲ ಕಾಮರ್ಸ್‍ಕಾಲೇಜಿನ ವಿದ್ಯಾರ್ಥಿನಿ ಕು.ಅಕ್ಷತಾ ವೀರಭದ್ರಪ್ಪ ನಾಯ್ಕರಅವರನ್ನು 2022-23ನೇ ಸಾಲಿನಲ್ಲಿ ಬಿ.ಕಾಂದಲ್ಲಿಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಸನ್ಮಾನಿಸಿ ಗೌರವಿಲಾಯಿತು.
ದತ್ತಿದಾನಿ ಚನಬಸಪ್ಪ ಮರದ ಮಾತನಾಡಿ, ವಿಶಾಲನ ನಿರಂತರ ನೆನಪಿಗಾಗಿ ದತ್ತಿ ಸ್ಥಾಪಿಸಿದ್ದು, ಓದಿದಕಾಲೇಜಿನಲ್ಲಿಕಲಿತ ಪ್ರತಿಭಾವಂತ ವಿದ್ಯಾರ್ಥಿಗೆ ಬಹುಮಾನ ನೀಡುವ ಮೂಲಕ ಅವನನ್ನು ಸ್ಮರಿಸಿಕೊಳ್ಳಲಾಗುತ್ತಿದೆ ಎಂದರು.
ವೇದಿಕೆ ಮೇಲೆ ವಿಜಯಲಕ್ಷ್ಮಿ ಹಂಚಿನಮನಿ ಉಪಸ್ಥಿತರಿದ್ದರು. ಪ್ರಮಿಳಾ ಜಕ್ಕಣ್ಣವರ ಪ್ರಾರ್ಥಿಸಿದರು.ಶಂಕರ ಕುಂಬಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಸಂಜೀವಕುಲಕರ್ಣಿ ವಂದಿಸಿದರು.ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು.
ಕಾರ್ಯಕ್ರಮದಲ್ಲಿಗುರು ಹಿರೇಮಠ, ಬಿ ಡಿ ಪಾಟೀಲ, ಕೆ.ಎಂ.ಅಂಗಡಿ, ಪ್ರಿ. ಶಶಿಧರ ತೋಡಕರ, ಸೀತಾರಾಮ ಶೆಟ್ಟಿ, ಸುನಿತಾ ನರೇಂದ್ರ, ಕುಬಸದ, ಬಸವರಾಜಕ್ವಾಟಿ, ಶೋಭಾಇಮ್ಮಡಿ, ವಾಯ್.ಎನ್. ಹವಾಲ್ದಾರ, ಮಹೇಶ ಮಠದ, ಹೇಮಂತದೇಸಾಯಿ, ಶಂಕರ ಮರದ, ಶಿವಾನಂದ ಮನಕವಾಡ, ಜಿ.ಆರ್.ದುರಗಾಡಿ, ಬಿ.ವೈ. ಪೂಜಾರ, ಎಸ್.ಜಿ. ಕರಡಿ, ಎಸ್.ವೈ.ಶಿರೂರ, ಎಂ.ಎಂ.ಚಿಕ್ಕಮಠ, ಮಹಾಂತೇಶ ನರೇಗಲ್, ಸೇರಿದಂತೆ ಹಂಚಿನಮನಿ ಕುಟುಂಬ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು.