ಚಟಗಳಿಗೆ ಬಲಿಯಾಗದೆ ಬದುಕು ಸರಿದಾರಿಯಲ್ಲಿ ಸಾಗಬೇಕು; ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ, ನ. 6; ಮಕ್ಕಳು ಕೇಳಿದ್ದನ್ನು ಅರ್ಥೈಸಿಕೊಳ್ಳುವ, ಅರ್ಥೈಸಿಕೊಂಡದನ್ನು ಅಳವಡಿಸಿಕೊಳ್ಳುವ ಅಭಿರುಚಿ ಬೆಳೆಯಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.ರಾಷ್ಟಿçÃಯ ನಾಟಕೋತ್ಸವ’ದ ನಿಮಿತ್ತ ಇಲ್ಲಿನ ಶಿವಕುಮಾರ ರಂಗಮAದಿರದಲ್ಲಿ ಆಯೋಜಿಸಿದ್ದ ಪ್ರಾರ್ಥನಾ ಸಭೆಯ ಸಾನ್ನಿಧ್ಯ ವಹಿಸಿ  ಮಾತನಾಡಿದ ಶ್ರೀಗಳು  ಎರಡು ರೀತಿಯ ಅಭಿರುಚಿಗಳು; ಒಂದು ನಾಲಿಗೆಯ ಮೂಲಕ ಅನುಭವಿಸುವಂಥದ್ದು, ಇನ್ನೊಂದು ಪಂಚೇAದ್ರಿಯಗಳಿಗೆ ಸಂಬAಧಿಸಿದ್ದು. ದೇಹ, ಮನಸ್ಸು, ಬುದ್ಧಿಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ವ್ಯಕ್ತಿತ್ವ ತನ್ನಿಂದ ತಾನೇ ಅರಳುವುದು. ಹೊಗಳಿಕೆ, ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು. ವರ್ತಮಾನದಲ್ಲಿ ಸರಿಯಾಗಿ ಬದುಕುವುದನ್ನು ರೂಢಿಸಿಕೊಂಡರೆ ಅವರ ಭೂತ ಮತ್ತು ಭವಿಷ್ಯ ತನ್ನಿಂದ ತಾನೇ ಸರಿಹೋಗುವುದು. ಕೇವಲ ಕೊಳಕನ್ನೇ ನೆನಪಿಸಿಕೊಳ್ಳದೆ, ಬೆಳಕನ್ನು ನೆನಪಿಸಿಕೊಂಡು ಮುಂದೆ ಸಾಗುವ ಸಂಕಲ್ಪ ಮಾಡಬೇಕು. ಪ್ರಾರ್ಥನೆ, ಧ್ಯಾನ, ಮೌನಗಳು ಈ ನಿಟ್ಟಿನಲ್ಲಿ ಸಹಕಾರಿಯಾಗುವವು ಎಂದರು. ಇಂದಿನ ಚಿಂತನೆಯಲ್ಲಿ `ಸಾಂಸ್ಕೃತಿಕ ಅಭಿರುಚಿ’ ಕುರಿತಂತೆ ಹೊಸದುರ್ಗದ ಅಧ್ಯಾಪಕ ಟಿ ಪ್ರಕಾಶ್ ಮಾತನಾಡಿ ಒಮ್ಮೆ ಪಡೆದ ಮಾನಸಿಕ ರುಚಿಯ ಅನುಭವವನ್ನೇ ಮತ್ತೆ-ಮತ್ತೆ ಪಡೆಯುವಂತೆ ಮಾಡುವುದೇ ಅಭಿರುಚಿ. ಇಲ್ಲಿನ ಮಕ್ಕಳು ಪ್ರಯೋಗಿಕವಾಗಿ ಸಾಂಸ್ಕೃತಿಕ ಅಭಿರುಚಿಯನ್ನು ಮೈಗೂಡಿಸಿಕೊಳ್ಳುತ್ತಿರುವುದು ಇದಕ್ಕೆ ಅತ್ಯುತ್ತಮವಾದ ಉದಾಹರಣೆ. ಮುಂದೆ ಬೆಳೆದಂತೆ ಅಭಿರುಚಿ ವ್ಯಕ್ತಿಯ ವರ್ತನೆಯಲ್ಲಿಯೂ ಸಕಾರಾತ್ಮಕ ಅಥವ ನಕಾರಾತ್ಮಕ ಬದಲಾವಣೆ ತರಬಲ್ಲವು. ಪ್ರತಿಯೊಬ್ಬರಲ್ಲಿಯೂ ತಾಯಿಯ ಗರ್ಭದಿಂದ ಹಿಡಿದು ಭೂತಾಯಿಯ ಗರ್ಭ ಸೇರುವವರೆಗೆ ಒಂದಲ್ಲ ಒಂದು ಅಭಿರುಚಿ ಇದ್ದೇ ಇರುತ್ತದೆ. ತಂದೆ-ತಾಯಿಗಳು, ಶಿಕ್ಷಕರು, ಪೋಷಕರು ಓದುವುದು, ಹಾಡುವುದು, ನೃತ್ಯ ಮಾಡುವುದು, ಸಂವಾದ, ಸಂವಹನ ಮುಂತಾದ ಸದಭಿರುಚಿಗಳನ್ನು ರೂಢಿಸಿಕೊಂಡಿದ್ದರೆ ಕೆಲವು ವಂಶಪಾರAಪರ್ಯವಾಗಿ ಬಂದರೆ, ಇನ್ನು ಕೆಲವು ಪ್ರೇರಣೆಯಿಂದ ಬರುವವು ಎಂದರು.