ಚಕ್ಕಡಿ ಬಂಡಿಯಲ್ಲಿ ಮಕ್ಕಳನ್ನು ಶಾಲೆಗೆ ಕರೆತಂದ ಪಾಲಕರು

ಸಂಡೂರು:ಜ:7:ವಿದ್ಯಾಗಮನ ಹಾಗೂ ಶಾಲಾ ಪ್ರಾರಂಭೋತ್ಸವವು ತಾಲೂಕಿನ ದೇವರ ಮಲ್ಲಾಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಬಹು ಅದ್ದೂರಿಯಾಗಿ ನಡೆಯಿತು.
ತಾಲೂಕಿನ ದೇವರಮಲ್ಲಾಪುರ ಗ್ರಾಮದ ಜನತೆ ತಮ್ಮ ಎತ್ತಿನ ಗಾಡಿಗಳಲ್ಲಿ ಮಕ್ಕಳನ್ನು ಕರೆತಂದರು, ಶಿಕ್ಷಕವೃಂದದವರು ಬಹು ಅದ್ದೂರಿಯಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಮೂಲಕ ಶಾಲೆಯನ್ನು ಪ್ರಾರಂಭಿಸಿದರು, ಪ್ರಾರಂಭದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಇಂದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಕಂಡು ಬಂದಿತು, ಅಲ್ಲದೆ ಮಕ್ಕಳಿಗೆ ಸ್ಯಾನಿಟೈಸರ್ಮ, ಮಾಸ್ಕ, ಸಾಮಾಜಿಕ ಅಂತರವನ್ನು ಕಾಪಾಡುವ ಎಲ್ಲಾ ನಿಯಮಗಳನ್ನು ಅಳವಿಡಿಸಿ ಮಕ್ಕಳು ಶಾಲೆಗೆ ಬರುವಂತೆ ಪ್ರೇರೇಪಿಸಲಾಯಿತು.