ಚಂದ್ರು ಸಾವು ತನಿಖೆ ಆರಂಭ

ಹೊಸಪೇಟೆ, ನ. ೪- ರೇಣುಕಾಚಾರ್ಯ ಅವರ ಅಣ್ಣನ ಮಗನ ಸಾವು ಪ್ರಕರಣ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹಂಪಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಹಂಪಿಯಿಂದ ಮೃತ್ತಿಕೆ ಕೊಂಡೊಯ್ಯಲು ಆಗಮಿಸಿದ್ದ ಅವರು ಈ ಪ್ರಕರಣ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತೇವೆ ಸಿಓಡಿ ಸೇರಿದಂತೆ ಯಾವುದೇ ಬೇರೆ ಹಂತದ ತನಿಖೆಗೆ ಕೊಡೋದಿಲ್ಲಾ, ನಮ್ಮ ಪೊಲೀಸರೇ ಸಮರ್ಥರಿದ್ದಾರೆ ಈ ಪ್ರಕರಣ ನಿಭಾಯಿಸುತ್ತಾರೆ, ತನಿಖೆ ನಡೆಸುತ್ತಿದ್ದಾರೆ ನಾನೊಬ್ಬ ಗೃಹ ಮಂತ್ರಿಯಾಗಿ, ತನಿಖೆ ಹಂತದಲ್ಲಿರೋದು ಮಾತನಾಡಿದ್ರೆ, ಅದು ಮತ್ತೇನೋ ಆಯಾಮ ಪಡೆಯುತ್ತದೆ ಹಾಗಾಗಿ ತನಿಖೆ ನಡೆದ ಬಳಿಕ ನಾವು ಉತ್ತರ ನೀಡುತ್ತೇವೆ
ಈಗಾಗಲೇ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗದಲ್ಲಿ ನಿರಂತರ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಅನ್ನೋ ವಿಚಾರವಾಗಿ ಈ ಹಿಂದೆಯೂ ಪ್ರಕರಣಗಳು ಹೆಚ್ಚಿದ್ವು, ಈಗ ಪ್ರಕರಣಗಳು ಕಡಿಮೆಯಾಗಿದೆ ಕೊತ್ವಾಲ್ ರಾಮಚಂದ್ರ, ಹೆಬ್ಬೆಟ್ಟು ಮಂಜು ಅವರ ಕಾಲದಿಂದಲೂ ಸಹ, ಅಲ್ಲಿ ಅಪರಾಧಗಳು ಇದ್ದು ಈಗ ಕಡಿಮೆಯಾಗಿದೆ, ಯಾವುದೋ ಎರಡ್ಮೂರು ಘಟನೆಗಳು ಆದ ತಕ್ಷಣ ಹೆಚ್ಚಿವೆ ಅಂತ ಹೇಳಬೇಡಿ ಎಂದ ಆರಗ ಜ್ಞಾನೇಂದ್ರ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದರು.