ಚಂದ್ರಾಸಿಂಗರಿಂದ ಆಹಾರ ಧಾನ್ಯದ ಕಿಟ್ ವಿತರಣೆ

ಬೀದರ:ಜೂ.9: ಕೋವಿಡ್-19 ಮಹಾಮಾರಿ ಸೋಂಕಿನಿಂದ ತತ್ತರಿಸಿರುವ ಹಾಗೂ ಲಾಕ್‍ಡೌನ್‍ನಿಂದ ತೀವ್ರ ಸಂಕಷ್ಟದಲ್ಲಿರುವ ಜಿಲ್ಲೆಯ ಬೀದರ ದಕ್ಷಿಣ ವಿಧಾನ ಸಭಾ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಲ್ಕಾಪೂರ, ಸುಲ್ತಾನಪುರ ಮತ್ತು ಅಷ್ಟೂರ ಗ್ರಾಮಗಳ ಅತಿ ಕಡುಬಡ ಜನರಿಗೆ ಗುರುತಿಸಿ ಮಲ್ಕಾಪೂರ ಗ್ರಾಮದಲ್ಲಿ ಕಾಂಗ್ರೆಸ್ ನಾಯಕ ಚಂದ್ರಾಸಿಂಗ್ ಅವರು ಆಹಾರ ಧಾನ್ಯದ ಕಿಟ್ ವಿತರಿಸಿದರು.

ನಂತರ ಅವರು ಮಾತನಾಡುತ್ತ, ಕರೋನಾ ವೈರಸ್ 2ನೇ ಅಲೆಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಎಷ್ಟೋ ಜನ ಕೆಲಸವಿಲ್ಲದೇ ತುಂಬ ಕಷ್ಟ ಅನುಭವಿಸುತ್ತಿದ್ದನ್ನು ಕಂಡು ನನ್ನಿಂದ ಎಷ್ಟು ಆಗುತ್ತೋ ಅಷ್ಟು ಬಡವರಿಗೆ ಆಹಾರದ ಕಿಟ್ ಕೊಟ್ಟು ಸಹಾಯ ಮಾಡುತ್ತಿದ್ದು, ಈ ಹಿಂದೆಯೂ ಸಹ ಕೋವಿಡ್-19 ಸಮಯದಲ್ಲಿ ನನ್ನಿಂದ ಆದ ಸಹಾಯ ಮಾಡಿರುತ್ತೇನೆ. ಅದೇ ರೀತಿ ಈ ವರ್ಷವೂ ಸಹ ಕೋವಿಡ್-19 ಸಂದರ್ಭದಲ್ಲಿ ಬಡ ಜನರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯ ಸಚಿನ ಮಲ್ಕಾಪೂರೆ, ದಾವೂದ್ ಖಾಸೀಂಸಾಬ, ಹಾಜಿಪಾಶಾ, ಮಾರುತಿ ಮಾಸ್ಟರ್, ಮುಜಿಬ ಮನ್ನಳ್ಳಿ, ಜಮೀಲ್ ಪಟೇಲ್, ಇಸ್ಮಾಯಿಲ್ ಸಾಬ ತೇಲಿ, ಗ್ರಾಮಗಳ ಮುಖಂಡರಾದ ಸಂತೋಷ ಸಣಗೊಂಡ, ಶಿವು ಮಲ್ಕಾಪೂರ, ಮೀಟು ಸುಲ್ತಾನಪೂರ, ರಾಹುಲ್ ಅಷ್ಟೂರು, ಫಿರೋಜ್ ಅಷ್ಟೂರು, ಅನೀಲ ಮಲ್ಕಾಪೂರ, ರಮೇಶ ವಡೆ, ವಿಜಯಗಿರಿ, ಶ್ರೀಮಂತ ಸಿದ್ಧಗೊಂಡ ಅವರು ಸೇರಿದಂತೆ ಅನೇಕ ಯುವ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.