ಚಂದ್ರಶೇಖರ ಪಾಟೀಲ ಅಭಿಮಾನಿಗಳಿಂದ ಕಾಶೀಯಾತ್ರೆ ಧರ್ಮದ ಕಾರ್ಯ ದೊಡ್ಡದು: ಕಾಶೀ ಜಗದ್ಗುರುಗಳು

ಕಲಬುರಗಿ:ನ.15: ಸಮಾಜದಲ್ಲಿ ಧರ್ಮದ ಕಾರ್ಯ ದೊಡ್ಡದು ಎಂದು ಕಾಶೀ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಹೇಳಿದರು.

ಧರ್ಮಸೇವಾ ನಿಟ್ಟಿನಲ್ಲಿ ಕಲಬುರಗಿ ಯ ಲಿಂ ಚಂದ್ರಶೇಖರ ಪಾಟೀಲ ರೇವೂರ ಅಭಿಮಾನಿಗಳ ಬಳಗದವರು ಕೈಗೊಂಡ ಕಾಶೀ ಯಾತ್ರೆಯಲ್ಲಿ ಶ್ರೀ ಮಠದ ವತಿಯಿಂದ ಸತ್ಕಾರ ನೆರವೇರಿಸಿ ಆಶೀರ್ವಚನ ನೀಡಿದರು.

ಧರ್ಮ ಕಾರ್ಯಗಳಿಂದ ಮನಸ್ಸಿನ ವಿಕಸತೆ ಹೊಂದುತ್ತದೆ. ಬಹುಮುಖ್ಯವಾಗಿ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.

ಪಾಲಿಕೆ ಸದಸ್ಯ ಪ್ರಭುಲಿಂಗ ಹಾದಿಮನಿ, ಮುಖಂಡರಾದ ಮಲ್ಲಿಕಾರ್ಜುನ ಖೇಮಜಿ ನೇತೃತ್ವದಲ್ಲಿನ ಪಾದಯಾತ್ರೆ ಯಲ್ಲಿ ವೀರಣ್ಣ ಗೊಳೆದ, ಚನ್ನಪ್ಪ ಡಿಗ್ಗಾವಿ, ನಾಗರಾಜ ಕಿರಣಗಿ, ಸತೀಶ್ ಜಮಖಂಡಿ, ಶಿವಕುಮಾರ ಸ್ವಾಮಿ, ಚಂದ್ರಕಾಂತ ಹಂಗರಗಿ, ಗಜೇಂದ್ರ ಕಲ್ಲಹಂಗರಗಿ, ಬಸವರಾಜ ಇಂಡಿ ಮಾಸ್ಟರ್, ಬಸವರಾಜ ಚೆಟ್ಟಿ, ದತ್ತು ಧರ್ಮವಾಡಿ, ಶರಣಪ್ಪ ಅತನೂರ, ಗಿರಿರಾಜ ಕೊಬಾಳ, ದಿಲೀಪ ಮೆಂಗದಿ, ವೈಜನಾಥ ರೆಡ್ಡಿ, ಸುಭಾಷ್ ನಾಯಕ,
ರಾಜು ಬಂಗರಗಿ ಸೇರಿದಂತೆ ಮುಂತಾದವರಿದ್ದರು.