ಚಂದ್ರಶೇಖರ ಆಜಾದ, ಬಾಲಗಂಗಾಧರ ತಿಲಕ ಅವರ ಜಯಂತಿ ಆಚರಣೆ

ಬೀದರ್,ಜು.24-ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಂದ್ರಶೇಖರ ಆಜಾದ ಮತ್ತು ಲೋಕಮಾನ್ಯ ಬಾಲಗಂಗಾಧರ ತಿಲಕ ರವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ವಿಜಯಕುಮಾರ ಕರಂಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀದೇವಿ ಮಾಣಿಕರಾವ ಅವರು ಚಂದ್ರಶೇಖರ್ ಆಜಾದ್ ಮತ್ತು ಬಾಲಗಂಗಾಧರ ತಿಲಕ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ ಮಾತನಾಡಿದರು.
ಚಂದ್ರಶೇಖರ ಆಜಾದ ಅವರು 12ನೇ ವಷಯಸ್ಸಿನಲ್ಲಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಆಗ ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಇತ್ತು, ಬ್ರಿಟಿಷರ ದಬ್ಬಾಳಿಕೆ ನೋಡಿ ಸಹಿಸಲಾರದೇ, ಈ ಪುಟ್ಟಬಾಲಕ ಒಂದು ಕಲ್ಲು ತೆಗೆದುಕೊಂಡು ಒಬ್ಬ ಬ್ರಿಟಿಷ ಅಧಿಕಾರಿ ತಲೆಗೆ ಹೊಡೆದ. ಪೋಲಿಸರು ಅವನನ್ನು ಹಿಡಿಯಲು ಹಿಂಬಾಲಿಸಿದರು ಅವನನ್ನು ಹಿಡಿದು ಸೆರೆಮನೆಗೆ ಹಾಕಿ ವಿಚಾರಣೆ ಮಾಡುತ್ತಿರುವಾಗ ನಿನ್ನ ಹೆಸರು ಏನು ಎಂದು ಕೇಳಿದಾಗ ನನ್ನ ಹೆಸರು ಆಜಾದ ಎಂದನು. ತಾಯಿ ಹೆಸರು – ಸ್ವಾಧೀನತೆ, ಊರು ಸೆರೆಮನೆಯೇ ನನ್ನ ಮನೆ ಎಂದು ಬ್ರಿಟಿಷರಿಗೆ ಹೆದರದೆ ಧೈರ್ಯದಿಂದ ಉತ್ತರಿಸಿದ. ಅಂದಿನಿಂದ ಅವನ ಹೆಸರು ಚಂದ್ರಶೇಖರ ಆಜಾದ ಎಂದು ಕರೆಯಲಾಯಿತು. ಮುಂದೆ ಆಜಾದ್ ಅವರು ಬ್ರಿಟಿಷರಿಂದ ತಪ್ಪಿಸಿಕೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಬ್ರಿಟಿಷರು ಆಜಾದರನ್ನು ತ್ರೀವ್ರವಾಗಿ ಹುಡುಕಲು ಆರಂಭಿಸಿದರು. ಆದರೆ ಅವರು ಬ್ರಿಟಿಷರ ಕೈಗೆ ಇನ್ನೇನು ಸಿಕ್ಕು ಬೀಳುತ್ತಾರೆ ಎಂದಾಗಲ್ಲೆಲ್ಲಾ ಬ್ರಿಟಿಷರಿಗೆ ಚೆಳ್ಳೆಹಣ್ಣು ಕೊಟ್ಟು ಪಾರಾಗುತ್ತಿದ್ದರು. ಇದನ್ನು ಗಮನಿಸಿದ ಬ್ರಿಟೀಷರು ಇವನನ್ನು ಹೇಗಾದರೂ ಹಿಡಿಯಲು ಸಾಧ್ಯವಾಗುವುದಿಲ್ಲಾ ಎಂದು ಅರಿತು, ಆಜಾದರ ಬಹಳ ಹತ್ತಿರದ ವ್ಯಕ್ತಿಯಾಗಿದ ವೀರಭದ್ರ ತಿವಾರಿ ಎಂಬುವನಿಗೆ ಹಣದ ಆಸೆ ತೋರಿಸಿದರು. ಹಣದ ಆಸೆಗೆ ಬಿದ್ದು ಆ ವ್ಯಕ್ತಿ ಆಜಾದರ ಸುಳಿವು ಬ್ರಿಟಿಷರಿಗೆ ನೀಡಿದ. 1931 ನೇ ಫೆಬ್ರುವರಿ 27 ರಂದು ಅಲ್ಛೆಡ್ ಪಾರ್ಕ್‍ನಲ್ಲಿ ಆಜಾದ ಕುಳಿತಿದ್ದ ವಿಷಯ ತಿಳಿದು ಆ ಸ್ಥಳಕ್ಕೆ 80 ಪೋಲಿಸರು ಬಂದೂಕು ಹಿಡಿದು ಪಾರ್ಕನ ಹತ್ತಿರ ಬಂದು ಸುತ್ತಲು ಸುತ್ತುವರೆದರು. ಗುಂಡಿನ ಸುರಿಮಳೆ ಸುರಿಸಿದರು. ಆ ಸಮಯದಲ್ಲಿ ಆಜಾದರ ಹತ್ತಿರ ಒಂದೇ ಒಂದು ಗುಂಡಿತ್ತು. ಅವರು ಅಂದು ಕೊಂಡ ಹಾಗೆ ನಾನು ಆಜಾದ ಎಂದು ಹೇಳಿಕೊಂಡು ಅವರೇ ತಮ್ಮ ತೆಲೆಗೆ ಗುಂಡು ಹಾರಿಸಿಕೊಳ್ಳುತ್ತಾರೆ ಎಂದು ವಿವರಿಸಿದರು.
ಇನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರ ಅವರ ತಂದೆ ಗಂಗಾಧರ ರಾಮಚಂದ್ರ ತಿಲಕರು, ತಾಯಿ ಪಾರ್ವತಿ ಬಾಯಿ ತಿಲಕ. ಈ ಇಂಗ್ಲೀಷರನ್ನು ನಮ್ಮ ದೇಶದಿಂದ ಹೊರಹಾಕಬೇಕು ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ಪಡೆಯುತ್ತೇನೆ ಎಂದು ಹೇಳಿ ಜನರಲ್ಲಿ ಸ್ವರಾಜ್ಯದ ಕಲ್ಪನೆಯನ್ನು ಬೆಳೆಸಿದರು. ಅದು ಶಿಕ್ಷಣದ ಮೂಲಕ ಸಾಧ್ಯ ಎಂದು ತಿಳಿದ ಅವರು ‘ನ್ಯೂ ಇಂಗ್ಲೀಷ ಸ್ಕೂಲ್’ ಎಂಬ ಶಾಲೆಯನ್ನು ತೆರೆದರು. ಆದರೆ ತಿಲಕರು ಇಷ್ಟಕ್ಕೆ ಸುಮ್ಮನೇ ಕೂಡಲಿಲ್ಲಾ, ಕೇಸರಿ ಮತ್ತು ಮರಾಠಾ ಪತ್ರಿಕೆಗಳನ್ನು ಪ್ರಾರಂಭಿಸಿದರು. ಈ ಪತ್ರಿಕೆಗಳಲ್ಲಿ ಬ್ರಿಟಿಷರು ಭಾರತೀಯರಿಗೆ ಮಾಡುವ ಮೊಸಗಳು ಅನ್ಯಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಎಂದು ಗಂಗಾಧರ ತಿಲಕ್ ಹಾಗೂ ಚಂದ್ರಶೇಖರ್ ಆಜಾದರ ಸಂಕ್ಷಿಪ್ತ ಜೀವನ ವೃತ್ತಾಂತವನ್ನು ಮಕ್ಕಳಿಗೆ ಹೇಳಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿವರ್ಗದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.