
ಬೀದರ್ ಜು 24: ಚಂದ್ರಶೇಖರ್ ಆಜಾದ್ ಅವರು ಭಾರತದ ಬಹು ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದರು ಎಂದು ಯುವ ಮುಖಂಡರಾದ ಎಂ.ಡಿ. ಫೆರೋಜಖಾನ್ ಅವರು ಹೇಳಿದರು.
ಅವರು ಜುಲೈ 23 ರಂದು ಶನಿವಾರ ಬೆಳಿಗ್ಗೆ ಬೀದರ ನಗರದ ಲಾಡಗೇರಿ ಹಿರೇಮಠದ ಆವರಣದಲ್ಲಿ ಚಂದ್ರಶೇಖರ್ ಆಜಾದ್ ಯುವ ಸಂಘದಿಂದ ಏರ್ಪಡಿಸಿದ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಜನ್ಮದಿನದ ಪ್ರಯುಕ್ತ ಆಜಾದ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಸಸಿ ನೆಟ್ಟು, ನೀರೂಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಯುವಕರು ದೇಶದ ಮಹಾನ್ ಪುರುಷರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ದೇಶದ ಏಕತೆಯಲ್ಲಿ ಭಾಗಿಯಾಗಲು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸುನೀಲ ಭಾವಿಕಟ್ಟಿ ಮಾತನಾಡಿ, ಇಂದಿನ ಯುವಕರÀಲ್ಲಿ ದೇಶ ಭಕ್ತಿಯ ಭಾವನೆ ಕಾಣದಿರುವುದು ದುಖ:ಕರ ಸಂಗತಿಯಾಗಿದೆ. ಇಂದಿನ ಯುವಕರೇ ನಾಳಿನ ಪ್ರಜೆಗಳಾಗುತ್ತಾರೆ ಆದರಿಂದ ಯುವಕರು ಯಾವೂದೆ ಅಡ್ಡದಾರಿಯಲ್ಲಿ ನಡೆಯದೆ ದೇಶ ಭಕ್ತಿಯನ್ನು ಮೈಗೂಡಿಕೊಳ್ಳಬೇಕೆಂದರು.
ಚಂದ್ರಶೇಖರ್ ಆಜಾದ ಯುವ ಸಂಘದ ಅಧ್ಯಕ್ಷರಾದ ವಿಜಯಕುಮಾರ ಭಂಡೆ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕದಂಬ ಕನ್ನಡ ನ್ಯೂಸ್ನ ಮುಖ್ಯಸ್ಥರಾದ ವಿಜಯಕುಮಾರ ಅಷ್ಟೂರೆ, ಯುವ ಮುಖಂಡರಾದ ವಸೀಮ್ ಸರ್, ವಿನಯ ಲಾಡಗೇರಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರದೀಪ್ ಬಿರಾದಾರ್, ರಮೇಶ ಜಮಾದಾರ್, ಮಲ್ಲಿಕಾರ್ಜುನ್ ಗೀರಿ, ಮಹಾರುದ್ರಪ್ಪಾ ಚಿಕ್ಲೆ, ಪ್ರಶಾಂತ ಭಾವಿಕಟ್ಟಿ, ಕಿರಣ ತಾಂಡುರಕರ್, ಗೌತಮ ನಿಜಾಂಪೂರೆ, ಅನೀಲಕುಮಾರ, ರವಿ ಮೇತ್ರೆ, ಸುರೇಶ ಏಕಲಾರ್, ಶಶಿಕಾಂತ ಭಾವಿಕಟ್ಟಿ, ಗಣೇಶ ಮೈಲೂರ್, ಅಜಯಕುಮಾರ ಕೋಳಿ, ಸಾಗರ ಗೀರಿ, ವಿಜಯಕುಮಾರ ಮುಲ್ತಾನಿ, ಬಂಟಿ ಬಿರಾದರ್, ಆಕಾಶ ಕುಮಾರ, ದರ್ಶನ್ ಲಾಡಗೇರಿ, ಶ್ರೇಶ ಭಂಡೆ, ಸಾಕ್ಷಿ ಸೇರಿದಂತೆ ಇತರರು ಇದ್ದರು.