ಚಂದ್ರಶೇಖರ್ ಅಜಾದ್ 93ನೇ ಹುತಾತ್ಮ ದಿನಾಚರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.27: ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಸ್ವತಂತ್ರ ಸಂಗ್ರಾಮದ ಆಪ್ರತಿಮ ಕ್ರಾಂತಿಕಾರಿ ಹೋರಾಟಗಾರರಾದ ಚಂದ್ರಶೇಖರ್ ಆಜಾದ್ ಅವರ 93ನೇ ಹುತಾತ್ಮ ದಿನವನ್ನು ದಿನವನ್ನು ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಆಚರಿಸಲಾಯಿತು.
ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ  ಮಾತನಾಡಿ, ಚಂದ್ರಶೇಖರ್ ಆಜಾದ್ ಭಾರತ ಸ್ವತಂತ್ರ ಸಂಗ್ರಾಮದ ಅಪ್ರತಿಮ ಹೋರಾಟಗಾರರು, ಬ್ರಿಟಿಷರ ಅಡಿಯಾಳು ಆಗದೆ ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು. ರಾಜಿ ರಹಿತ ಹೋರಾಟಕ್ಕೆ ಭದ್ರ ಬುನಾದಿಯನ್ನು ಹಾಕಿದರು, ಜಾತಿ-ಧರ್ಮದ ಗಡಿ ಮೀರಿ ನಾವೆಲ್ಲರೂ ಭಾರತೀಯರೆಂಬ ಮನೋಭಾವದಿಂದ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಶ್ರಮಿಸಿದರು ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್. ಆಜಾದ್ ಅವರ ತಾಯಿ ಮಗನನ್ನು ಕಾಶಿಗೆ ಕಳುಹಿಸಿ ಒಬ್ಬ ಸಾಂಸ್ಕೃತ ಪಂಡಿತನನ್ನಾಗಿ ಮಾಡಲು ಬಯಸಿದ್ದರು, ಆದರೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನಸು ಹೊಂದಿದ್ದ ವಿದ್ಯಾರ್ಥಿ ಆಜಾದ್ ಅವರು, 15ವರ್ಷದಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು. 1921, ಡಿಸೆಂಬರ್ 20ರಂದು ಪಾರ್ಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿನ್ನ ಹೆಸರು ಏನೆಂದು ಕೇಳಿದಾಗ ‘ಆಜಾದ್’ ಎಂದು ಉತ್ತರಿಸಿದರು. ಅಸಹಕಾರ ಚಳುವಳಿಯನ್ನು ಗಾಂಧೀಜಿ ಅವರು ಹಿಂಪಡೆದ್ದರಿಂದ ಗಾಂಧೀಜಿ ಅವರ ದಾರಿ ಬಿಟ್ಟು ಸಂಚಿಂದ್ರನಾಥ್ ಸನ್ಯಾಲ್ ರೈ ರಚಿಸಿದ ಹೆಚ್.ಆರ್.ಎ ಸೇರಿದರು. ನಂತರ ಭಗತ್ ಸಿಂಗ್ ರವರು ಸಮಾಜವಾದಿ ಸಿದ್ಧಾಂತದೊಂದಿಗೆ ‘ಹೆಚ್.ಎಸ್.ಆರ್.ಎ’ ಮರುನಾಮಕರಣ ಮಾಡಿ, ಸಂಘಟನೆಯ ಕಮಾಂಡರ್ ಇನ್ ಚೀಫ್ ನ ಜವಾಬ್ದಾರಿ ನಿರ್ವಹಿಸಿದರು. ಭಗತ್ ಸಿಂಗ್ ರವರು ಗಲ್ಲಿಗೇರಿಸುವ ಕೆಲ ದಿನಗಳ ಹಿಂದೆ ಅಂದರೆ ಫೆಬ್ರವರಿ 27, 1931ರಂದು ಆಜಾದ್ ಅವರು ಇರುವ ಅಲಫ್ರೇಡ್ ಪಾರ್ಕ್ ಮುತ್ತಿಗೆ ಹಾಕಿ ಬ್ರಿಟಿಷರು ಗುಂಡಿನ ಮಳೆ ಸುರಿದರು. ತಮಗೆ ತಾವೇ ಗುಂಡು ಹೊಡೆದುಕೊಂಡು ಸ್ವಾತಂತ್ರವಾಗಿ ಆಜಾದ್ ಅವರು ಜೀವಕೊಟ್ಟರು. ಇಂದಿನ ವಿದ್ಯಾರ್ಥಿ ಮತ್ತು ಯುವ ಜನರಿಗೆ  ಆಜಾದ್ ರು ಆದರ್ಶವಾಗಬೇಕು ಮತ್ತು ಇಂದು ದೇಶದ  ಜ್ವಲಂತ ಸಮಸ್ಯೆಗಳಾದ ಬಡತನ,ಅಸಮಾನತೆ ,ನಿರುದ್ಯೋಗ ,ಮಹಿಳೆಯರ ಅಭದ್ರತೆ,  ಜಾತಿ ಹಾಗೂ ಕೋಮು ವೈಷಮ್ಯ, ಭ್ರಷ್ಟಾಚಾರ, ಶಿಕ್ಷಣ ಹಾಗೂ ಆರೋಗ್ಯದ ವ್ಯಾಪಾರಿಕರಣ ವಿರುದ್ಧ  ಹೋರಾಟ ಕಟ್ಟಲು ವಿದ್ಯಾರ್ಥಿ-ಯುವಜನರಿಗೆ ಹಾಗೂ  ಎಲ್ಲಾ ದುಡಿಯುವ  ಜನತೆಗೆ  ಚಂದ್ರಶೇಖರ್ ಆಜಾದ್ ಅವರ ಹೋರಾಟ ಹಾಗೂ ವಿಚಾರಗಳು ಆದರ್ಶ ವಾಗಬೇಕಾಗಿದೆ, ಅವರ ಕಂಡಂತ ಸಮಾಜವಾದ ಭಾರತವನ್ನೂ  ನಿರ್ಮಿಸಲು ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷರಾದ ಜೆ.ಸೌಮ್ಯ, ಸೆಕ್ರೆಟರಿಯೇಟ್ ಸದಸ್ಯರು ಎಮ್.ಶಾಂತಿ, ಸಿದ್ದು, ಉಮಾ ಮತ್ತಿತರರು ಭಾಗವಹಿಸಿದ್ದರು.