ಚಂದ್ರಶಿಕಾರಿ ಗ್ರಂಥ ನ. 12ಕ್ಕೆ ಲೋಕಾರ್ಪಣೆ:ಶಾಸಕ ತೇಲ್ಕೂರ

ಸೇಡಂ, ನ,06: ತಾಲೂಕಿನಿಂದ ಜಿಲ್ಲೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚುದಂತಹ ಸೇಡಂನ ಮೂರು ಮುತ್ತಿನಂತಿರುವ ರತ್ನಗಳಾದ ಡಾ. ಬಸವರಾಜ ಪಾಟೀಲ್ ಸೇಡಂ, ಮಾಜಿ ಶಾಸಕ ನಾಗರೆಡ್ಡಿ ಪಾಟೀಲ್ ಮತ್ತು ವಿಧಾನಸಭೆಯ ಮಾಜಿ ಉಪಸಭಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ರೆಡ್ಡಿ ದೇಶಮುಖ್ ಮದನ ಅವರಿಗೆ ಸಲ್ಲುತ್ತದೆ. ಸಾಹಿತಿ ಪತ್ರಕರ್ತರಾದ ಸೇಡಂ ನೆಲದ ಸಾಧಕರನ್ನು ಪರಿಚಯಿಸಲು ಹೊರಟಿರುವ ಮಹಿಪಾಲರೆಡ್ಡಿ ಮುನ್ನೂರು ಸಂಪಾದಕತ್ವದಲ್ಲಿ ಹೊರಬರಲಿಲ್ಲ ಶ್ರೀ ಚಂದ್ರಶೇಖರ್ ದೇಶಮುಖ್ ಮದನ ಅವರ ಯಶೋಗಾಥೆಯ “ಚಂದ್ರಶಿಖಾರಿ” ಇದೇ ನವಂಬರ್ 12ನೇ ತಾರೀಕು ಹೈದರಾಬಾದ್ಗೆ ಹೋಗುವ ಬಟಗೇರಾ ಹೂಡಾ ಮಾರ್ಗದ ರಸ್ತೆಯಲ್ಲಿರುವ ಮಹಾಸಾದ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾ ಯೋಗಿ ವೇಮನ ದೇವಾಲಯ ಪ್ರಾಂಗಾಣದಲ್ಲಿ
ಮಾಜಿ ಮುಖ್ಯಮಂತ್ರಿ ಶಾಸಕರಾದ ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಬಿಡುಗಡೆಗೊಳಿಸಲಿದ್ದಾರೆ ಹಾಗೂ ಸಹಸ್ರ ಚಂದ್ರದರ್ಶನ ಚಾಲನೆಗೆ ಶಹಪುರ್ ಶಾಸಕರು ಮಾಜಿ ಸಚಿವ ಜನಾರ್ದನ ರೆಡ್ಡಿ ಗಾಲಿ ಮಾಡಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಅಧ್ಯಕ್ಷರು ಹಾಗೂ ಶ್ರೀ ಚಂದ್ರಶೇಖರ್ ದೇಶಮುಖ್ ಮದನ ಅವರ ಅಭಿನಂದನಾ ಸಮಿತಿಯ ಅಧ್ಯಕ್ಷರು ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು.
ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿರುವ ಸುದ್ದಿಗೋಷ್ಠಿಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಈ ವೇಳೆಯಲ್ಲಿ ಚಂದ್ರಶೇಖರ್ ರೆಡ್ಡಿ ದೇಶಮುಖ್ ಮದನ ಅವರ ಅಭಿನಂದನ ಸಮಿತಿಯ ಗೌರವದಕ್ಷರದ ಪೂಜ್ಯಶ್ರೀ ಸದಾಶಿವ ಸ್ವಾಮೀಜಿ, ಚಂದ್ರ ಶಿಕಾರಿ ಸಂಪಾದಕ ಮಹಿಪಾಲರೆಡ್ಡಿ ಮುನ್ನೂರ್, ಮತ್ತು ಅಭಿನಂದನಾ ಸಮಿತಿಯ ಪದಾಧಿಕಾರಿಗಳಾದ ಶಿವಕುಮಾರ್ ಪಾಟೀಲ್ ತೇಲ್ಕೂರ್, ನಾಗೇಶ್ವರರಾವ್ ಪಾಟೀಲ್, ಶಿವಶರಣರೆಡ್ಡಿ ಪಾಟೀಲ್, ಪರ್ವತ್ ರೆಡ್ಡಿ ಪಾಟೀಲ್ ನಾಮವರ, ನಾಗರೆಡ್ಡಿ ದೇಶಮುಖ್ ಮದನ, ಸತೀಶ್ ಪಾಟೀಲ್ ರಂಜೋಳ್, ವೀರೇಶ್ ಹೂಗಾರ್, ಅನಂತಪ್ಪ ರೆಡ್ಡಿ, ಜಗದೇವಪ್ಪ ನಾಚವರ, ನಾಗಭೂಷ, ಜಗನ್ನಾಥ್ ರೆಡ್ಡಿ ಗೋಟುರ, ಹೇಮರೆಡ್ಡಿ ಪಾಟೀಲ್, ವಿಜಯಕುಮಾರ್ ಆಡಕಿ, ಶಿವಪುತ್ರ ಮೊಘ, ನಾಗಯ್ಯ ಸ್ವಾಮಿ ಬೊಮ್ನಳ್ಳಿ, ರವೀಂದ್ರ ಕುಮಾರ್, ಶ್ರೀಮಂತ ಅವಂಟಿ, ಆನಂದ್ ಚಂದಾಪುರ್, ಮುಂತಾದವರು ಇದ್ದರು.