
ಸಂಜೆವಾಣಿ ವಾರ್ತೆದಾವಣಗೆರೆ.ಆ.೨೫; ಚಂದ್ರಯಾನ –3 ರ ಸಂಪೂರ್ಣ ಯಶಸ್ಸು ಇಸ್ರೋ ಹಾಗೂ ಇಸ್ರೋ ವಿಜ್ಞಾನಿಗಳಿಗೆ ಸಲ್ಲುತ್ತದೆ. ಚಂದ್ರಯಾನ ಮೂರರ ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗುವ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಬ್ರಿಕ್ಸ್ ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. ಚಂದ್ರಯಾನ ಮೂರರ ಯಶಸ್ಸು ಸುದ್ದಿ ತಿಳಿಯುತ್ತಲೇ ಎಂದಿನಂತೆ ಮೋದಿ ಅವರು ರಾಜಕೀಯ ಲಾಭ ಪಡೆಯಲು ಹವಣಿಸಲು ಶುರು ಮಾಡಿದ್ದಾರೆ. ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಲು ಕೆಲವೇ ನಿಮಿಷಗಳಿದ್ದಾಗ ಪ್ರಧಾನಿ ಮೋದಿ ಕಾಣಿಸಿಕೊಂಡರು. ರಾಜಕೀಯ ಮಾರ್ಕೆಟ್ ಮಾಡಿಕೊಳ್ಳಲು ಮೋದಿ ಹವಣಿಸಿದ್ದು ದೇಶದ ಜನ ನೋಡಿದ್ದಾರೆಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಮೋದಿ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಚಂದ್ರಯಾನ ಮೂರರ ಯಶಸ್ವಿಯ ಲಾಭ ಕೀರ್ತಿ ಎಲ್ಲವೂ ಇಸ್ರೋ ಅಧ್ಯಕ್ಷರಾದ ಎಸ್ ಸೋಮನಾಥ್ ಹಾಗೂ ಅವರ ಅಸಂಖ್ಯಾತ ವಿಜ್ಞಾನಿಗಳ ತಂಡಕ್ಕೆ ಸಲ್ಲಬೇಕು. ಇದರಲ್ಲಿ ಪ್ರಧಾನಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ದೇಶದ ಜನ ಅವಕಾಶ ನೀಡಲವೆಂದು ಟೀಕಿಸಿದ್ದಾರೆ. ದೇಶದ ವಿಜ್ಞಾನಿಗಳ ಪರಿಶ್ರಮದ ಫಲವಾಗಿರುವ ಚಂದ್ರಯಾನದ ಯಶಸ್ಸಿನಲಾಭ ತೆಗೆದುಕೊಳ್ಳಲು ಮುಂದಾಗಿರುವ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರ ಬಾಹ್ಯಾಕಾಶ ಸಂಶೋಧನೆಗೆ ಬಜೆಟ್ ನಲ್ಲಿ ಶೇಕಡಾ 8 ರಷ್ಟು ಅನುದಾನವನ್ನು ಕಡಿತಗೊಳಿಸಿದ್ದಾರೆ. ಚಂದ್ರಯಾನ ಮೂರರ ಅನುದಾನದಲ್ಲಿ ಶೇಕಡ 38 ರಷ್ಟು ಕಡಿತಗೊಳಿಸಿದ್ದಾರೆ. ಬಾಹ್ಯಾಕಾಶ ವಿಜ್ಞಾನಿಗಳಿಗೆ ಬೇರೆ ದೇಶಗಳಿಗೆ ಹೋಲಿಸಿದರೆ ಐದನೇ ಒಂದು ಭಾಗದಷ್ಟು ಮಾತ್ರ ವೇತನ ನೀಡಲಾಗುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷರಾದ ಮಾಧವನ್ ಹೇಳಿದ್ದಾರೆ ಸಂಶೋಧನೆಗಳಿಗೆ,ವಿಜ್ಞಾನಿಗಳಿಗೆ ಎಂದೂ ಪ್ರೋತ್ಸಾಹ ನೀಡದ ಪ್ರಧಾನಿ ಮೋದಿಗೆ ಚಂದ್ರಯಾನದ ಯಶಸ್ಸಿನ ಕ್ರೆಡಿಟ್ ಪಡೆಯಲು ಯಾವುದೇ ನೈತಿಕ ಹಕ್ಕು ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕರ್ನಾಟಕದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಡಬಲ್ ಇಂಜಿನ್,ಡಬಲ್ ಇಂಜಿನ್ ಸರ್ಕಾರ ಎಂದು ಬೊಬ್ಬೆ ಹೊಡೆದು ರಾಜ್ಯದ ಗಲ್ಲಿ ಗಲ್ಲಿಯಲ್ಲಿ ರೋಡ್ ಶೋ ಹಾಗೂ ಭರ್ಜರಿ ಪ್ರಚಾರ ಸಭೆಗಳನ್ನು ನಡೆಸಿದರು ಸಹ ಮೋದಿ ಮಾತಿಗೆ ರಾಜ್ಯದ ಪ್ರಜ್ಞಾವಂತ ಜನರು ಸೊಪ್ಪು ಹಾಕಿಲ್ಲ ಇದೀಗ ಲೋಕಸಭಾ ಚುನಾವಣೆಗಳು ಸಮೀಪಿಸಿರುವುದರಿಂದ ಪುನಃ ರೋಡ್ ಶೋ ಮೂಲಕವಾಗಲಿ ಯಾವುದೇ ರೀತಿಯ ಮೋದಿ ಅಗ್ಗದ ಪ್ರಚಾರಕ್ಕೆ ಜನ ಮಣಿಯುವುದಿಲ್ಲವೆಂದು ಹಾಗೂ ಮೋದಿ ಅವರ ಮಾರ್ಕೆಟ್ ನಡೆಯಲ್ಲ ಎಂದಿದ್ದಾರೆ.