
ಕಲಬುರಗಿ,ಆ.23-ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ಶಹಾಬಜಾರದ ಜಗದಂಬಾ ಮಂದಿರದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ವತಿಯಿಂದ ಹೋಮ-ಹವನ ಮತ್ತು ಜಗದಂಬಾ ದೇವಿಗೆ ಪೂಜೆ ಸಲ್ಲಿಸಲಾಯಿತು.
ಸಮಾಜದ ಪ್ರಮುಖರಾದ ನಾರಾಯಣರಾವ ಹಬೀಬ್, ಅಂಬಾದಾಸ ಮಿಸ್ಕಿನ್, ನರಸಿಂಗಸಾ ಪವಾರ, ನರಸಿಂಗ್ ಮೇಂಗಜಿ, ಸುರೇಶ ಮಿಸ್ಕಿನ್, ನಾಗೇಶ ಶಾಲಗರ, ಅಮರನಾಥ ಗಾಂಗಜಿ, ಸುಭಾಷ ಮೇಂಗಜಿ, ಸಮಾಜದ ಶ್ರಾವಣ ಮಾಸದ ಸಮತಿ ಅಧ್ಯಕ್ಷ ರವೀಂದ್ರಕುಮಾರ ಮೇಂಗಜಿ ಸೇರಿದಂತೆ ಸಮಾಜದ ಹಿರಿಯರು, ಮಹಿಳೆಯರು ಮತ್ತು ಯುವಕರು ಭಾಗವಹಿಸಿದ್ದರು.