ಚಂದ್ರಯಾನ-3 ಯಶಸ್ವಿ : ಸಂಭ್ರಮ


ಚನ್ನಮ್ಮನ ಕಿತ್ತೂರ,ಆ.25: ಸಮರ್ಥ ನಾಯಕರ ಬೆಂಬಲದಿಂದ, ಸಹಸ್ರಾರು ಭಾರತೀಯರ ಪ್ರಾರ್ಥನೆಯಿಂದ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಯಾವುದೇ ಅಡ್ಡಿ ಆತಂಕವಿಲ್ಲದೇ ಚಂದ್ರನಲ್ಲಿ ಯಶಸ್ವಿಯಾಗಿ ತಲುಪಿದೆ ಎಂದು ಸಮಾಜ ಸೇವಕ ಹಾಗೂ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಪಟ್ಟಣದ ಚನ್ನಮ್ಮಾಜೀ ವರ್ತುಳದಲ್ಲಿ ಬಿಜೆಪಿ ನೂರಾರು ಕಾರ್ಯಕರ್ತರು ಸೇರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. 140 ಕೋಟಿ ಭಾರತೀಯರ ಕನಸು-ನನಸಾಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆ ಇಳಿಸಿದ ಮೊದಲ ದೇಶ ಭಾರತ. ಇದರಿಂದ ಎಲ್ಲರ ಮನದಲ್ಲಿ ಸಂತಸ ಮನೆ ಮಾಡಿದೆ ಎಂದರು.
ಬಿಜೆಪಿ ಮಂಡಳಾಧ್ಯಕ್ಷ ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ, ಯಲ್ಲಪ್ಪ ವಕ್ಕುಂದ, ದಿನೇಶ ಒಳಸಂಗ, ಬಸವರಾಜ ಮಂಗಳಗಟ್ಟಿ, ವiಹಾಂತೇಶ ಗಿರನಟ್ಟಿ ಡಿ.ಆರ್ ಪಾಟೀಲ, ಬಿಜೆಪಿ ನೂರಾರು ಕಾರ್ಯಕರ್ತರಿದ್ದರು.