
ಲಕ್ಷ್ಮೇಶ್ವರ,ಆ.25: ಪಟ್ಟಣದ ಸ್ಕೂಲ್ ಚಂದನದಲ್ಲಿ ವಿದ್ಯಾರ್ಥಿಗಳು ಚಂದ್ರೋತ್ಸವದ ಸಂಭ್ರಮಾಚರಣೆ ಮಾಡಿದರು.
ಭಾರತ ರತ್ನ ಸಿ ಎನ್ ಆರ್ ರಾವ್ ವಿಜ್ಞಾನ ಕೇಂದ್ರದಲ್ಲಿ ಕೌತುಕದಿಂದ ಕುಳಿತಿದ್ದ ನೂರಾರು ವಿದ್ಯಾರ್ಥಿಗಳು ಈ ಮೊದಲು ಸಂಸ್ಥೆಯಲ್ಲಿ ಚಂದ್ರಯಾನದ ಉಪಗ್ರಹದ ಮಾದರಿಯನ್ನು ಮಾಡಿದ್ದರು. ಚಂದ್ರಯಾನ-3 ಯಶಸ್ವಿಯಾಗುತ್ತಿದ್ದಂತೆ ಅವರಲ್ಲಿ ಸಂಭ್ರಮ ಮನೆ ಮಾಡಿತ್ತು
ಭಾರತದ ವಿಜ್ಞಾನಿಗಳ ಸತತ ಪರಿಶ್ರಮ ಪ್ರಯತ್ನದ ಫಲವಾಗಿ ಚಾರಿತ್ರಿಕ ಇತಿಹಾಸ ನಿರ್ಮಿಸಿದ ವಿಜ್ಞಾನಿಗಳು ಜಗತ್ತಿನಲ್ಲಿ ಭಾರತ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮುವ ಮೂಲಕ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷಟಿ. ಈಶ್ವರ್ ಹೇಳಿದರು.