ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ತಾಳಿಕೋಟೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ

ತಾಳಿಕೋಟೆ:ಆ.24: ಇಸ್ರೋ ವಿಜ್ಞಾನಿಗಳ ತಂಡ ಯಶಸ್ವಿಯಾಗಿ ಚಂದ್ರಯಾನ-3ನ್ನು ಯಶಸ್ವಿಯಾಗಿ ದಕ್ಷೀಣ ದ್ರುವದ ಚಂದ್ರಮೇಲೆ ಲ್ಯಾಂಡಿಂಗ್ ಮಾಡುವ ಮೂಲಕ ವಿಶ್ವದಾಖಲೆ ಬರೆಯುವದರೊಂದಿಗೆ ಭಾರತ ದೇಶವನ್ನು ವಿಶ್ವದ ಮೊದಲ ಅಗ್ರ ಸ್ಥಾನಕ್ಕೆ ಕೊಂಡೊಯ್ದಿದಕ್ಕೆ ತಾಳಿಕೋಟೆ ಪಟ್ಟಣದಲ್ಲಿ ಹಿರಿಯರ ಆದಿಯಾಗಿ ಯುವಕರ ಹರ್ಷೋದ್ಗಾರ, ಪಟಾಕ್ಷೀಗಳ ಸುರಿಮಳೆ ಗೈಯುವದರೊಂದಿಗೆ ಸಂಭ್ರಮಾಚರಣೆಯನ್ನು ಮಾಡಿದರು.
ಸುಮಾರು ನಾಲ್ಕೈದು ಯುವಕರ ತಂಡಗಳು ಕೆಲವರು ಬೈಕ್ ರ್ಯಾಲಿ ಮಾಡುವ ಮೂಲಕ ಭಾರತ ದೇಶದ ದ್ವಜವನ್ನು ಹಿಡಿದು ಭಾರತ ಮಾತಾಕೀ ಜೈ ಎಂಬ ಘೋಷಣೆಗಳು ಕೂಗುತ್ತಾ ಎಲ್ಲ ರಸ್ತೆಗಳಲ್ಲಿ ಸಂಭ್ರಮಿಸುತ್ತಾ ಸಂಚರಿಸುತ್ತಿದ್ದರೆ ಇನ್ನೂ ಕೆಲವು ಯುವಕರು ಭಾರತ ದೇಶದ ದ್ವಜವನ್ನು ಹಿಡಿದು ಪಟಾಕ್ಷೀ ಸಿಡಿಸಿ ಸಂಭ್ರಮಿಸುತ್ತಿದ್ದರು. ಪಟ್ಟಣದ ಮಹಾ ರಾಣಾಪ್ರತಾಪಸಿಂಹ್ ವೃತ್ತದಲ್ಲಿ ಹಿರಿಯರು ಮತ್ತು ಯುವಕರು ಒಗ್ಗೂಡಿ ಪಟಾಕ್ಷೀಸಿ ಸಿಡಿಸಿ ಸಂಭ್ರಮಿಸಿದರಲ್ಲದೇ ಕೇಕ್ ಕತ್ತರಿಸುವ ಮೂಲಕ ಭಾರತ ದೇಶದ ದ್ವಜದೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಮಯದಲ್ಲಿ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಚಂದ್ರನ ದಕ್ಷೀಣ ದ್ರುವದ ಮೇಲೆ ನಮ್ಮ ಭಾರತ ದೇಶದ ಇಸ್ರೋ ವಿಜ್ಞಾನಿಗಳು ಪಾದಾರ್ಪಣೆ ಮಾಡುವ ಮೂಲಕ ವಿಶ್ವದಲ್ಲಿಯೇ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಚಂದ್ರನ ಕಕ್ಷೆ ಸೇರಿರುವ ಚಂದ್ರಯಾನ-3 ಎಲ್ಲ ರೀತಿಯ ಸಂಶೋದನೆಯ ಮೂಲಕ ಇಡೀ ವಿಶ್ವಕ್ಕೆ ಚಂದ್ರನ ಮೇಲಿನ ಎಲ್ಲ ಪರಿಕರಗಳನ್ನು ಪರಿಚಯಿಸಲಿದೆ ಇದರಿಂದ ಇಡೀ ವಿಶ್ವದಲ್ಲಿಯೇ ಭಾರತ ದೇಶ ಆರ್ಥಿಕವಾಗಿ ಭಲಾಢ್ಯವಾಗುವದರ ಜೊತೆಗೆ ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ಮೊದಲ ದೇಶ ಭಾರತವೆಂಬುದು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಈ ಸಮಯದಲ್ಲಿ ಮುಖಂಡರುಗಳಾದ ಹರಿಸಿಂಗ್ ಮೂಲಿಮನಿ, ಸುರೇಶ ಹಜೇರಿ, ಗೋವಿಂದಸಿಂಗ್ ಗೌಡಗೇರಿ, ತಿಪ್ಪಣ್ಣ ಸಜ್ಜನ, ರವಿ ಕಟ್ಟಿಮನಿ, ಅರುಣ ದಡೇದ, ಕೃಷ್ಣಾ ಹಡಪದ, ರತನಸಿಂಗ್ ಕೊಕಟನೂರ, ಸಿರಸಕುಮಾರ ಹಜೇರಿ, ನಾಗು ಮಡಿವಾಳರ, ಬಾಲಾಜಿಸಂಗ್, ದೇವಿಂದ್ರ ಮನ್ಯಾಳ, ವಿಠ್ಠಲಸಿಂಗ್ ಹಜೇರಿ, ಅಯ್ಯಣ್ ಗೊಟಗುಣಕಿ, ರಮೇಶ ಮೋಹಿತೆ, ಮಾನಸಿಂಗ್ ಹಜೇರಿ, ಶ್ರೀಕಾಂತ ಶೆಟ್ಟಿ, ಮಲ್ಲಣ್ಣ ಹಿಪ್ಪರಗಿ, ಪ್ರದೀಪ ರಜಪೂತ, ರಾಘವೇಂದ್ರ ವಿಜಾಪೂರ, ಒಳಗೊಂಡು ನೂರಾರು ಯುವಕರು ಪಾಲ್ಗೊಂಡು ಸಂಭ್ರಮಿಸಿದರು.