ಚಂದ್ರಯಾನ 3 ಯಶಸ್ವಿ, ಭಾರತೀಯರಿಗೆ ಐತಿಹಾಸಿಕ ದಿನ : ಅರ್ಶಿಯಾ ಚಿಂಚಲಿ

ಅಥಣಿ : ಆ.24:ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡೆ. ವಿಜ್ಞಾನಿಗಳ ಪರಿಶ್ರಮವು ನನ್ನಂತ ಕೋಟ್ಯಂತರ ಭಾರತೀಯರ ಕನಸನ್ನು ನನಸಾಗಿಸಿದೆ. ಚಂದ್ರನ ಮೇಲೆ ಭಾರತದ ಪತಾಕೆ ಹಾರಿಸಿ ದೇಶವಾಸಿಗಳು ಹೆಮ್ಮೆಪಡುವಂತೆ ಮಾಡಿದ ಐತಿಹಾಸಿಕ ದಿನ, ಇಸ್ರೋದ ಪರಿಶ್ರಮಕ್ಕೆ ಜಯ ದಕ್ಕಿದೆ. ಇಂದು ಇಡೀ ಜಗತ್ತು ನಿಬ್ಬೆರಗಾಗಿ ಭಾರತದ ಕಡೆ ನೋಡುವಂತಾಗಿದೆ, ಈ ಸಾಧನೆಯಿಂದ ಯುವ ವಿಜ್ಞಾನಿಗಳಿಗೆ ಸಾಕಷ್ಟು ಲಾಭವಾಗಲಿದೆ, ಚಂದ್ರಯಾನ ಯಶಸ್ವಿಗೆ ಶ್ರಮಿಸಿದ ಭಾರತದ ಹೆಮ್ಮಯ ವಿಜ್ಞಾನಿಗಳಿಗೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.