
ಜೇವರಗಿ:ಆ.25:ಚಂದ್ರಯಾನ-3 ಯಶಸ್ವಿ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಾ ಜೆ.ಡಿ.ಎಸ್ ಪಕ್ಷದ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಸಂಭ್ರಮಾಚರಣೆ ನಡೆಯಿತು..ಭಾರತ ಮಾತಾಕಿ ಜೈ,ವಂದೇ ಮಾತರಂ.ಘೋಷಣೆ ಕೂಗಿದರು.
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ವಿಜಯೋತ್ಸವ ಆಚರಿಸಲಾಯಿತು.ತಾಲೂಕ ಅಧ್ಯಕ್ಷ ಅಬ್ದುಲ್ ರೌಫ ಹವಾಲ್ದಾರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜ್ ಪಾಟೀಲ್ ಸೇರಿದಂತೆ ಅನೇಕರು ಇದ್ದರು