ಕಲಬುರಗಿ,ಜು.14:ಚಂದ್ರಯಾನ – 3 ರಾಕೆಟ್ ನ ಯಶಸ್ವಿ ಉಡಾವಣೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ
ಡಾ.ಅಂಬಾರಾಯ ಅಷ್ಠಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಾಧನೆಯು ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಬಾನೆತ್ತರಕ್ಕೆ ಏರಿಸುವಲ್ಲಿ ಸಫಲವಾಗಿದೆ.
ಈ ಮಹತ್ವದ ಸಾಧನೆಯಿಂದ ನಮ್ಮ ವಿಜ್ಞಾನಿಗಳ ನಿರಂತರ ಪರಿಶ್ರಮ – ಪ್ರಯತ್ನ ಸಮರ್ಪಣೆ ಈ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ವಿಜ್ಞಾನಿಗಳ ಸಾಹಸ, ಜಾಣ್ಮೆ ಮತ್ತು ಚೈತನ್ಯ ಅಭಿನಂದನಾರ್ಹವಾಗಿದೆ ಎಂದು ಡಾ. ಅಂಬಾರಾಯ ಅಷ್ಠಗಿ ಅಭಿಪ್ರಾಯಿಸಿದ್ದಾರೆ.