
ಇಂಡಿ:ಆ.3:ಚಂದ್ರಯಾನ -3 ಮಿಷನ್ ದಲ್ಲಿ ನಿಂಬೆ ನಾಡಿನ ಗ್ರಾಮೀಣ ಪ್ರತಿಭೆ ವಿಲಾಸ ರಾಠೋಡ. ಪ್ರಸ್ತುತ ಚಂದ್ರಯಾನ 3 ಉಡಾವಣೆಯಲ್ಲಿ ಕೂಡ ಮುಖ್ಯ ಜವಾಬ್ದಾರಿ ವಹಿಸಿದ್ದಾರೆ.
ಅವರು ಇಂಡಿ ಪಟ್ಟಣದ ದೇಶಪಾಂಡೆ ತಾಂಡಾ ನಿವಾಸಿ. ತಂದೆ ತಾರು ಶಂಕರ ರಾಠೋಡ, ತಾಯಿ ವಾಲುಬಾಯಿ ಒಕ್ಕುತನದ ಕುಟುಂಬ. ಅವರು ಇಂಡಿಯಲ್ಲಿ ಎಸ್ಸೆಸ್ಸೆಲ್ಸಿ ವರೆಗೆ ಓದಿದ್ದಾರೆ.
ಅವರು ಪಟ್ಟಣದ ಶ್ರೀ ಶಾಂತೇಶ್ವರ ಪ್ರೌಢಶಾಲೆಯಲ್ಲಿ 1988 ಎಸ್ಸೆಸ್ಸೆಲ್ಸಿ ಕಲಿತ ವಿದ್ಯಾರ್ಥಿ.
ವಿಜಯಪುರದ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಕಲಿತು ನಂತರ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಈ ನಂತರ ವಿಟಿಯು ಬೆಳಗಾವಿಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.
ನಂತರ 1993 ರಲ್ಲಿ ಇಸ್ರೋದಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದರು. ಮಾರಿಸಸ್,ಇಂಡೋನೆಶಿಯಾ ದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಈ ಮಧ್ಯೆ 2001 ರಲ್ಲಿ ಕಾಂತಾ ನಾಯಕರ ಜೊತೆ ಮದುವೆಯಾದರು. ಈ ಮಧ್ಯೆ ಅವರು ಕ್ಷಿಪಣಿ ಜನಕ ಎ.ಪಿ.ಜೆ ಅಬ್ದುಲ ಕಲಾಂ ಇವರ ಮಾರ್ಗದರ್ಶನದಲ್ಲಿ ಕಾರ್ಯ ಮಾಡಿದ್ದಾರೆ. ಈಗ ಸೋಮನಾಥ ಇವರ ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
2020 ರಲ್ಲಿ ವಿಜಯಪುರದ ಬಿಎಲ್ ಡಿಈ ಸಂಸ್ಥೆಯಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಕೂಡಿದ ಉಪಗ್ರಹ ಮಾಹಿತಿ ಮತ್ತು ಉಡಾವಣೆಯ ಉಪಯೋಗಗಳು ಕುರಿತು ಸಂವಾದ ನಡೆಸಿದ್ದಾರೆ.
ಅದರಂತೆ ಇಂಡಿಯ ಗುರುಬಸವ ಶಿಕ್ಷಣ ಸಂಸ್ಥೆ ಸೇರಿದಂತೆ ಜಿಲ್ಲೆಯ ಅನೇಕ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ.
ಇಂಡಿಯ ಶ್ರೀ ಶಾಂತೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಡಿ.ಜಿ.ನಾರಾಯಣಕರ,ಆರ್.ಬಿ.ಧನಶೆಟ್ಟಿ,ಜಿ.ಜಿ.ಚವ್ಹಾಣ,ಎಸ್.ಡಿ.ಬಗಲಿ ಯವರು ಶಿಷ್ಯ ವಿಲಾಸ ಸಾಧನೆಗೆ ಪ್ರಸಂಸಿದ್ದಾರೆ.
1988 ರಲ್ಲಿ ಕಲಿತ ಗೆಳೆಯರ ಬಳಗದ ಡಾ|| ರವಿ ಕೊಟೆಣ್ಣವರ,ವಿಲಾಸ ನಾಯಿಕ,ಉಮೇಶ ತಿರ್ಲಾಪುರ,ಅನೀಲ ಪಾಟೀಲ,ಸುನೀಲ ಕೂಡಗಿ,ನರೇಂದ್ರ ಕೋಟಿ,ಸೋಮಶೇಖರ ಬಿರಾದಾರ,ಪಂಡಿತ ರಾಠೋಡ,ಲಕ್ಷ್ಮಣ ಶಿಂಧೆ,ಸುಧಾಕರ ಹಿರೇಮಠ,ಗೀರೀಶ ಪೊಪಡಿ,ಪ್ರಕಾಶ ಬಿರಾದಾರ,ಸುನೀಲ ಪಾಟೀಲ,ಮಲ್ಲಿಕಾರ್ಜುನ ದೇವರ,ರವಿ ಪಾಟೀಲ,ಎಂ.ಪಿ.ವರ್ಧನ,ರವಿ ಕುಲಕರ್ಣಿ,ಪಿರೋಜ ಶಿಂಧೆ,ಮಾರುತಿ ಬಿಸೆ,ದತ್ತಾ ಪಾಟೀಲ ಮಿತ್ರನ ಸಾಧನೆಗೆ ಸಂತೋಷ ವ್ಯಕ್ತ ಪಡಿಸಿದ್ದಾರೆ.
ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿ ವಿಲಾಸ ಚಂದ್ರಯಾನ -3 ಮಿಷನ್ ದಲ್ಲಿ ಸೇವೆ ಸಲ್ಲಿಸುತ್ತಿರುವದು ನಮ್ಮ ಶಾಲೆಯ ಸಂಸ್ಥೆಯ ಗೌರವ ಹೆಚ್ಚಿಸಿದೆ. ಅವರ ಸಾಧನೆ ಜಿಲ್ಲೆಗೆ ಹೆಮ್ಮೆಯ ವಿಷಯ
ಎ.ಪಿ.ಬಿರಡ ಉಪ ಪ್ರಾಚಾರ್ಯರರು ಶ್ರೀ ಶಾಂತೇಶ್ವರ ಪ.ಪೂ ವಿಭಾಗ ಇಂಡಿ