ಚಂದ್ರಯಾನ-3 ಉಪಗ್ರಹ ಉಡಾವಣೆ ವೀಕ್ಷಣೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು15: ಇಸ್ರೋ ವತಿಯಿಂದ ಶುಕ್ರವಾರ ಚಂದ್ರಯಾನ-3 ಉಪಗ್ರಹ ಉಡಾವಣೆ ವೀಕ್ಷಣೆಗಾಗಿ ಇಲ್ಲಿನ ಲಿಟಲ್ ಹಾಟ್ರ್ಸ್ ಶಾಲೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳ ದೊಡ್ಡ ಟಿವಿ ಪರದೇ ಮೇಲೆ ಉಪಗ್ರಹ ಉಡಾವಣೆಯನ್ನು ವೀಕ್ಷಿಸಿದರು. ಚಂದ್ರಯಾನ-3' ಎಂಬ ಅಕ್ಷರದಲ್ಲಿ ಮಕ್ಕಳು ಕುಳಿತಿದ್ದು ಗಮನ ಸೆಳೆಯಿತು. ನಂತರ ಪ್ರಾಚಾರ್ಯ ಗಂಗಾಧರ ಶಿರಹಟ್ಟಿ ಮಾತನಾಡಿಚಂದ್ರಯಾನ-3 ಭಾರತೀಯರಿಗೆಲ್ಲ ಅತ್ಯಂತ ಖುಷಿ ಕೊಡುವ ಸಂಗತಿ. ಈವರೆಗೆ ಚಂದ್ರನಲ್ಲಿಗೆ ಜಗತ್ತಿನ ಕೇವಲ ಮೂರು ರಾಷ್ಟ್ರಗಳು ಮಾತ್ರ ಉಪಗ್ರಹಗಳನ್ನು ಕಳುಹಿಸುವಲ್ಲಿ ಯಶಸ್ವಿ ಆಗಿದ್ದವು. ಆದರೆ ಸಧ್ಯ ಆ ಸಾಲಿನಲ್ಲಿ ಭಾರತವೂ ಸೇರ್ಪಡೆ ಆಗಿದ್ದು ಒಂದು ಸಾಧನೆ’ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಮೇರಿ ಅಂಥೋನಿ, ಶ್ವೇತಾ ಪೂಜಾರ, ಪೂರ್ಣಿಮಾ ಕೊಡ್ಲಿ, ಸುವರ್ಣ ಹಡಗಲಿ, ಸೀಮಾ ಪಾಟೀಲ, ವಿಜಯಲಕ್ಷ್ಮೀ ಹಣಗಿ, ಯಶೋಧಾ, ಅಕ್ಷತಾ ಕೋರಿಶೆಟ್ಟರ, ದಾನಮ್ಮ ಜವಳಿ, ಶಬೀನಾ ಕೋರ್ಪಾಲಿ, ನೇತ್ರಾ ಗಡಿಯಪ್ಪನವರ, ರೇಷ್ಮಾ ಖುದ್ದುಬೈ, ಮಾರುತಿ ಮ್ಯಾಗೇರಿ, ವಿರೇಶ ಶಿರಹಟ್ಟಿ, ಕಾಂತೇಶ ಮುದಗಲ್ಲ, ಈಶ್ವರಸಿಂಗಗ ದೊಡ್ಡಮನಿ ಇದ್ದರು.