ಚಂದ್ರಯಾನ -3 ಉಡಾವಣೆಗೆ ಜುಲೈ-14 : ಮುಹೂರ್ತ ನಿಗಧಿ; ಇಸ್ರೋ

ಬೆಂಗಳೂರು,ಜು.6- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಚಂದ್ರಯಾನ-3 ರ ಉಡಾವಣೆಗೆ ದಿನಾಂಕ‌ ನಿಗಧಿ ಮಾಡಿದೆ.ಜುಲೈ 14 ರಂದು ಆಂದ್ರಪ್ರದೇಶದ ಶ್ರೀ ಹರಿಕೋಟಾದ ಸತಿಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಮದ್ಯಾಹ್ನ 2.30ಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ.ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ನೀಡಿರುವ ಇಸ್ರೋ ಅಪರೂಪದ ಕ್ಷಣಕ್ಕೆ ಇಡೀ ಭಾರತೀಯ ಭಾಹ್ಯಾಕಾಶ ಸಂಶೋದನಾ ಸಂಸ್ಥೆಯ ಸಿಬ್ಬಂದಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ಈ ಬಾರಿ ಚಂದ್ರಯಾನ- 3 ಉಡಾವಣೆಯನ್ನು ಯಶಸ್ವಿಗೊಳಿಸಲು ಭಾರತೀಯ ಬಾಹ್ಯಾಕಾಶದ ಇಡೀ ತಂಡ ಹಗಲಿರುಳು ಶ್ರಮಿಸುತ್ತಿದೆ.ಕಳೆದಬಾರಿಯ ಚಂದ್ರಯಾನ ಉಡಾವಣೆಗೆ ಇಡೀ ಇಸ್ರೋ ತಂಡ ಹಗಲು ಇರಳು ಎನ್ನದೆ ಕೆಲಸ ಮಾಡಿತ್ತು ಕೊನೆಗಳಿಗೆಯಲ್ಲಿ ನಿಗಧಿತ ಕಕ್ಷೆ ತಲುಪುವಲ್ಲಿ ಸಾದ್ಯವಾಗಿರಲಿಲ್ಲ.

ಈ ಬಾರಿ ಚಂದ್ರಯಾನ- 3 ಉಡಾವಣೆಯನ್ನು ಯಶಸ್ವಿಗೊಳಿಸಲು ಮತ್ತು ರೋವರ್ ಮತ್ತು ಲ್ಯಾಂಡರ್ ಅನ್ನು ಸುರಕ್ಣಿತವಾಗಿ ಚಂದ್ರನ ಅಂಗಳದಲ್ಲಿ ಇಳಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ – ಇಸ್ರೋದ ಎಲ್ಲಾ ವಿಜ್ಞಾನಿಗಳು ನಿರತಂತರವಾಗಿ ಕೆಲಸ ಮಾಡುತ್ತಿವೆ.ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ರೋವರ್ ಇಳಿಸಿ ಅಲ್ಲಿನ ವೈಶಿಷ್ಯತೆಗಳನ್ನು ಅಧ್ಯಯನ ಮಾಡುವುದು ಚಂದ್ರಯಾನ – 3 ಉಡಾವಣೆಯ ಪ್ರಮುಖ ಉದ್ದೇಶವಾಗಿದೆ.ಕಳೆದ ವಾರಿ ಡಾ.ಕೆ ಶಿವನ್ ನೇತೃತ್ವದಲ್ಲಿ ಚಂದ್ರಯಾನ ಕೈಗೊಳ್ಳಲಾಗಿತ್ತು. ಈ ಬಾರಿ ಇಸ್ರೋ ಅದ್ಯಕ್ಷ ಡಾ. ಸೋಮನಾಥ್ ನೇತೃತ್ವದಲ್ಲಿ ಚಂದ್ರಯಾನ -3 ಉಡಾವಣೆಯಾಗಲಿದೆ.