ಚಂದ್ರಯಾನ 3 ; ಇಸ್ರೋ ವಿಜ್ಞಾನಿಗಳ ಸಾಧನೆಗೆ ಸಂಭ್ರಮ

ಸಂಜೆವಾಣಿ ವಾರ್ತೆ

ದಾವಣಗೆರೆ, ಆ.24,: ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿರುವ ಇಸ್ರೋ ವಿಜ್ಞಾನಿಗಳಿಗೆ ಶುಭ ಕೋರಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ನಗರದ ಹಳೇ ಬಸ್ ನಿಲ್ದಾಣದ ಬಳಿ ರಮೇಶ್ ಕಾಫಿ ಬಾರ್ ಬಳಗ, ಪತ್ರಿಕಾ ವಿತರಕರ ಬಳಗ, ವಾಯುವಿಹಾರಿಗಳ ಬಳಗದ ಸ್ನೇಹಿತರು ಗುರುವಾರ ಇಸ್ರೋ ವಿಜ್ಞಾನಿಗಳಿಗೆ ಶುಭಾಶಯ ಕೋರಿ. ನಮ್ಮ ವಿಜ್ಞಾನಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ, ಇಡೀ ವಿಶ್ವವೇ ನಮ್ಮ ಭಾರತ ವನ್ನು ಹೋಗಳುವಂತಗಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯ ಬಸಣ್ಣ, ಸತೀಶ್, ರಮೇಶ್, ಕೊಟ್ರಬಸಪ್ಪ, ಅರುಣ್ ಕುಮಾರ್, ಅನಿಲ್ ಬಾರೆಂಗಳ್, ಬಸವರಾಜ, ಶೇಖರ್, ಷಣ್ಮುಖಪ್ಪ, ಅಡಿವೆಪ್ಪ, ಮುರುಗೇಶ್ ಬಾಳೆಕಾಯಿ, ಅಬ್ರಹಾರ್, ಶಿವಣ್ಣ, ಶಶಿ, ಅರುಣ, ಕೆ.ಬಿ.ವಾಸಣ್ಣ, ಪಟಾಕಿ ಶಿವು, ಪೋಪಟ್ ಲಾಲ್ ಜೈನ್ ಇತರರು ಇದ್ದರು.