ಚಂದ್ರಯಾನ- ೩ ಯಶಸ್ವಿ; ಸಿಹಿ ವಿತರಿಸಿ ಸಂಭ್ರಮ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೨೪: ಚಂದ್ರಯಾನ -3 ಯಶಸ್ವಿಯಾಗಿ ಸಾಪ್ಟ್ ಲ್ಯಾಂಡ್ ಆದ ಹಿನ್ನಲೆಯಲ್ಲಿ ನಗರದ ಗಡಿಯಾರಕಂಬದ ಬಳಿ ಸ್ನೇಹಿತರ ತಂಡದವರು ಸಿಹಿ ಹಂಚಿ ಪಟಾಕಿ ಸಿಡಿಸಿ ಈ ಯಶಸ್ವಿಗೆ ಕಾರಣೀಭೂತರಾದ ಇಸ್ರೋ ದ ಎಲ್ಲ ವಿಜ್ಞಾನಿಗಳಿಗೆ ಹಾಗೂ ಈ ಶುಭಕಾರ್ಯಕ್ಕೆ ಬೆನ್ನಲುಬಾಗಿ ನಿಂತ ಜನಪ್ರಿಯ ಪ್ರಧಾನ ಮಂತ್ರಿಗಳಿಗೆ  ಹಾಗೂ ಪ್ರತ್ಯೇಕ ಮತ್ತು ಪರೋಕ್ಷ ಕೆಲಸಮಾಡಿದ ಎಲ್ಲರಿಗೂ ಶುಭಕೋರಿದರು. ಈ ಸಂದರ್ಭದಲ್ಲಿ  ಚೌಕಿಪೇಟೆ ಅಕ್ಕಿ ವರ್ತಕರಾದ   ಎಂ ವಿ ಜಯಪ್ರಕಾಶ್ ಮಾಗಿ ,ಜಗದೀಶ್ ಬ್ಯಾಡಗಿ, ಜಯರಾಜ್ ಮೇಟಿ,    ನಿಖಿಲ್ ಮಾಗಿ ,    ಟಿ ಎಸ್ ಮಲ್ಲಿಕಾರ್ಜುನ ಬಸವರಾಜ ಅಥಣಿ ,ಅಕ್ಕಿ ವರ್ತಕರಾದ ಎ ಎಸ್ ಸ್ವಾಮಿ, ಸಿ ಆರ್ ರುದ್ರೇಶ್‌‌, ಬಿ ಎಂ ಮಹಾಂತೇಶ, ಶರಣಪ್ಪ ಠಕ್ಕಳಕಿ, ರೈಸ್ ಬ್ರೋಕರ್ ಗಳಾದ  ಸತೀಶ್ ಹುಬ್ಬಳ್ಳಿ, ಪರಶುರಾಮ,  ಪ್ರಕಾಶ್ ಮೇಟಿ ಮತ್ತಿತರರಿದ್ದರು.