ಚಂದ್ರಯಾನ-೩ ಯಶಸ್ವಿಗೆ ಕೈಜೋಡಿಸಿದ ಸಪ್ತಗಿರಿ ಐ.ಟಿ.ಐ ವಿದ್ಯಾರ್ಥಿಗಳು

ಬೀದರ್:ಆ.25: ಇತ್ತಿಚೀಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ವಿಜ್ಞಾನಿಗಳು ಚಂದ್ರಯಾನ-೩ ಯಶಸ್ವಿ ಕಾರ್ಯಾಚರಣೆ ನಡೆಸಿ ವಿಕ್ರಮನನ್ನು ಚಂದ್ರನ ದಕ್ಷಿಣ ಮೆಲ್ಮೆöÊಯಲ್ಲಿ ಸುರಕ್ಷಿತ ಸ್ಥಳದಲ್ಲಿ ಲ್ಯಾಂಡರ್ ಮಾಡುವ ಮೂಲಕ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದ್ದು ಗಮನಾರ್ಹ.
ಈ ಸಾಧನೆಯಲ್ಲಿ ‘ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ರಾಶಿ’ ಎಂಬAತೆ ಹಲವಾರು ವಿಜ್ಞಾನಿಗಳು, ತಂತ್ರಜ್ಞರು ಹಾಗೂ ಸಿಬ್ಬಂದಿಗಳು ಪರಿಶ್ರಮ ವಹಿಸಿ ಕೆಲಸ ಮಾಡಿದ ಫಲವಾಗಿ ಭಾರತಕ್ಕೆ ಒಳ್ಳೆ ಹೆಸರು ಬರಲು ಸಾಧ್ಯವಾಗಿದೆ.
ಈ ಸಾಧನೆಯ ಹಿಂದೆ ರಾಜ್ಯದ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್ ನಗರದ ಸಪ್ತಗಿರಿ ಐ.ಟಿ.ಐ ಕಾಲೇಜಿನ ಹಳೆ ವಿದ್ಯಾರ್ಥಿ ಸಿದ್ದುಗೊಂಡ ತಂದೆ ಕೃಷ್ಣಪ್ಪ ಎಂಬ ವಿದ್ಯಾರ್ಥಿ ಶ್ರೀ ಹರಿ ಕೋಟಾದಲ್ಲಿ ತಂತ್ರಜ್ಞಾನ ವಿಭಾಗದಲ್ಲಿ ರಾಕೇಟ್ ಅಸೆಂಬ್ಲಿಯಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವರು. ಅದೇ ರೀತಿ ಇನ್ನೋರ್ವ ವಿದ್ಯಾರ್ಥಿ ಬೀರಗೊಂಡ ತಂದೆ ಮಹಾದೇವಪ್ಪ ಎಂಬುವವರು ಇಸ್ರೊದಲ್ಲಿ ಸೇವೆ ಮಾಡುತ್ತಿದ್ದು, ಇತ್ತಿಚೀನ ಚಂದ್ರಯಾನ-೩ ಯಶಸ್ವಿ ಕಾರ್ಯದಲ್ಲಿ ಲ್ಯಾಂಡರ್ ಜೋಡಣೆಯಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಅನುಪಮ ಸೇವೆ ಸಲ್ಲಿಸಿರುವರು. ಈ ಇಬ್ಬರ ಸಾಧನೆ ಇಡೀ ಜಿಲ್ಲೆಯ ಪಾಲಿಗೆ ಸಂತಸದ ಕ್ಷಣವೆಂದು ಉಲ್ಲೆಖಿಸಬಹುದಾಗಿದೆ.
ಸಿದ್ದುಗೊಂಡ ೨೦೦೮-೧೦ರಲ್ಲಿ ಹಾಗೂ ಬೀರಗೊಂಡ ೨೦೦೯-೧೧ರಲ್ಲಿ ಸಪ್ತಗಿರಿ ಕಾಲೇಜಿನಲ್ಲಿ ಐ.ಟಿ.ಐ ಪಾಸಾಗಿರುವರು.
ಇವರ ಈ ಅದ್ಭುತ ಸಾಧನೆಗೆ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ತಾರಾಬಾಯಿ ತಾಂದಳೆ, ಕಾರ್ಯದರ್ಶಿ ಗೋಪಾಲ.ಡಿ.ತಾಂದಳೆ, ಪ್ರಾಚಾರ್ಯ ಶ್ರೀನಿವಾಸ.ಡಿ. ತಾಂದಳೆ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಗೋವಿಂದ. ಡಿ.ತಾಂದಳೆ ಸೇರಿದಂತೆ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಡಳಿತ ಮಂಡಳಿ ಸದಸ್ಯರು, ಸಪ್ತಗಿರಿ ಪದವಿ ಪೂರ್ವ ಹಾಗೂ ಐ.ಟಿ.ಐ ಕಾಲೇಜಿನ ಎಲ್ಲ ಉಪನ್ಯಾಸಕರು, ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.