ಚಂದ್ರಯಾನ-೩ರ ಯಶಸ್ವಿ ಲ್ಯಾಂಡಿಂಗ್ ಸಂಭ್ರಮ

ಅರಕೇರಾ,ಆ.೨೪-
ಚಂದ್ರನ ದಕ್ಷಿಣ ಧೃವಕ್ಕೆ ಪಾದಾರ್ಪಣೆ ಮಾಡಿದ ಏಕೈಕ ರಾಷ್ಟ್ರ ಭಾರತ ಎಂದು ಐಸಿಐಸಿಐ ಫೌಂಡೇಶನ್ ಕಮ್ಯುನಿಟಿ ಫೆಸಿಲೇಟರ್ ವಿಜಯ ಮಹಾಂತೇಶ ಹಿರೇಮಠ ಬಣ್ಣಿಸಿದರು.
ಚಂದ್ರಯಾನ-೩ ರ ಯಶಸ್ವಿ ಲ್ಯಾಂಡಿಂಗ್ ಆದ ಹಿನ್ನಲೆ ಬುಧವಾರ ರಾತ್ರಿ ಪಟ್ಟಣದ ಯುವಕರು ಗಾಂಧಿ ವೃತ್ತದ ಬಳಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಳ್ಳುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತ ಚಂದ್ರನಲ್ಲಿ ನೌಕೆ ಇಳಿಸಿದ ೪ ನೇ ದೇಶ. ಇಡೀ ವಿಶ್ವದ ನಿರೀಕ್ಷೆಗೆ ಭಾರತ ಹೆಮ್ಮೆಯ ಉತ್ತರ ನೀಡಿದೆ. ಮಹಾತ್ವಾಕಾಂಕ್ಷೆ ಯೋಜನೆ ಯಶಸ್ವಿಯಿಂದ ಮುಂದುವರಿದ ರಾಷ್ಟ್ರಗಳು ನಿಬ್ಬೆರಗಾಗುವಂತೆ ಮಾಡಿದೆ. ಚಂದ್ರನ ಅಂಗಳದಲ್ಲಿ ನೌಕೆ ಇಳಿಸಿದ ಅಮೆರಿಕ, ರಷ್ಯಾ, ಚೀನಾ, ನಂತರ ನಾಲ್ಕನೇ ದೇಶ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಭಾರತೀಯರ ಸಂಭ್ರಮಕ್ಕೆ ಪ್ರತಿಷ್ಠಿತ ಇಸ್ರೋ ಸಂಸ್ಥೆ ವಿಜ್ಞಾನಿಗಳು ಕಾರಣ. ಚಂದ್ರಯಾನ ಜತೆಗೆ ಭಾರತ ಮಾನವ ಸಹಿತ ಗಗನಯಾನ ಯೋಜನೆಗೆ ಸಿದ್ಧತೆ ನಡೆಸಿದೆ. ಹೊಸ ಹೊಸ ಕಲ್ಪನೆ, ಆವಿಷ್ಕಾರಗಳನ್ನು ಹೊತ್ತ ಇಸ್ರೋ ಸಂಸ್ಥೆ ನಮ್ಮ ಕರ್ನಾಟಕದಲ್ಲಿದೆ ಎಂಬುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಪ್ರಮುಖರಾದ ವೈಜುನಾಥ ಹಿರೇಮಠ, ಮಹಾಂತೇಶ ಪೂಜಾರಿ, ಬೂದೆಪ್ಪ ಸಾಹುಕಾರ, ಸೂಗೂರೇಶ ತಾಳಿಕೋಟಿ, ನಾಗರಾಜ ಸ್ವಾಮಿ ಚಿಕ್ಕಮಠ, ಶಿವಕುಮಾರ ನಾಡಗೌಡ, ಬಾಲಯ್ಯ ಕೊತ್ವಾಲ್, ಶಿವಕುಮಾರ ನಾಯಕ, ಸುಧಾಕರ, ಹರ್ಷವರ್ಧನ್ ನಾಯಕ ದೊರೆ, ಕೆ.ಮಂಜುನಾಥ, ಸೂಗುರೇಶ ಕುರುಕುಂದಿ, ಪ್ರಶಾಂತ ಸ್ವಾಮಿ, ಹನುಮಂತ್ರಾಯ ನಾಯಕ, ಚನ್ನಬಸವ ಗುತ್ತೆದಾರ, ಮೌಲ ಇತರರಿದ್ದರು.