
ಬೆಂಗಳೂರು, ಏ.೨೨-ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಚಂದ್ರಯಾನ ೩ ಕುರಿತು ತಮಾಷೆ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.
ತಮ್ಮ ಪೋಸ್ಟ್ ಟೀಕೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, , ಧ್ವೇಷ, ವೇಷವನ್ನೇ ನೋಡುತ್ತದೆ. ನಾನು ನಮ್ಮ ಕೇರಳದ ಚಹಾ ಮಾರುವವನನ್ನು ಉಲ್ಲೇಖಿಸಿ ಒಂದು ಜೋಕ್ ಮಾಡಿದ್ದೆ ಅಷ್ಟೇ. ನಿಮಗೆ ಜೋಕ್ ಅರ್ಥವಾಗದೇ ಇದ್ದರೆ ನಿಮಗೇ ನೀವು ಜೋಕ್ ಮಾಡಿಕೊಂಡಂತೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಪ್ರಕಾಶ್ ರಾಜ್ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.

ಆದರೆ ಇದೀಗ ಮೋದಿ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ಚಂದ್ರಯಾನ ೩ ಯೋಜನೆಯನ್ನು ಲೇವಡಿ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ಲುಂಗಿ ಹಾಕಿಕೊಂಡು ಟೀ ಸೋಸುತ್ತಿರುವ ಫೋಟೋವನ್ನು ಪ್ರಕಟಿಸಿದ್ದ ಪ್ರಕಾಶ್ ರಾಜ್, ವಿಕ್ರಮ್ ಲ್ಯಾಂಡರ್ ಅನ್ನು ಟ್ಯಾಗ್ ಮಾಡಿ ಚಂದ್ರನ ಮೊದಲ ಫೋಟೋ ಎಂದು ಪೋಸ್ಟ್ ಮಾಡಿದ್ದರು. ಹಲವರು ಇದನ್ನು ಕಿಡಿ ಕಾರಿದ್ದಾರೆ. ನಿಮಗೆ ರಾಜಕೀಯ ಆಕ್ರೋಶವಿದ್ದರೆ ಈ ರೀತಿ ತೋರಿಸಬೇಡಿ. ಚಂದ್ರಯಾನ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಇದು ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ತಂಡದ ಸಾಧನೆ. ದೇಶದ ಹೆಮ್ಮೆ. ಈ ಬಗ್ಗೆ ತಮಾಷೆ ಮಾಡಿ ನಿಮ್ಮನ್ನು ಕೀಳಾಗಿಸಿಕೊಳ್ಳಬೇಡಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.