ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.25; ಎಲ್ಲೆಡೆ ಗಣಪತಿ ಹಬ್ಬದ ಸಡಗರ ಮನೆ ಮಾಡಿದೆ. ಬೆಣ್ಣೆನಗರಿಯಲ್ಲಿ ಗಣೇಶ ಹಬ್ಬ ಅತ್ಯಂತ ವಿಭಿನ್ನ ವಿಶೇಷಕ್ಕೆ ಕಾರಣವಾಗಿದೆ. ನಗರದ ಆಂಜನೇಯ ಬಡಾವಣೆ ನಿವಾಸಿಯಾದ ಶ್ರೀಮತಿ ತಾರಾ ಶಿವನಗೌಡ ಅವರ ಮನೆಯಲ್ಲಿ ದೇಶ ಪ್ರೇಮದ ಸಂಕೇತವಾಗಿ ಗಣೇಶ ಹಬ್ಬ ಆಚರಣೆ ಮಾಡಲಾಗಿದೆ. ಮನೆಯಲ್ಲಿ ಇಸ್ರೋದ ಯಶಸ್ವಿ ಚಂದ್ರಯಾನದ ಕಲ್ಪನೆಯಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿವರ್ಷ ವಿಭಿನ್ನವಾದ ಕಲ್ಪನೆಯೊಂದಿಗೆ ಗಣೇಶ ಹಬ್ಬ ಮಾಡುತ್ತಾರೆ. ಈ ಬಾರಿ ವಿಜ್ಞಾನಿಗಳಿಗೆ ಶುಭ ಹಾರೈಸುವೆ ಹಿನ್ನಲೆ ಈ ರೀತಿ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿದೆ ಎಂದು ಶ್ರೀಮತಿ ತಾರಾ ಶಿವನಗೌಡ ಅವರ ಪುತ್ರ ಅಕ್ಷಯ್ ಗೌಡ ತಿಳಿಸಿದರು.